ಬೆಂಗಳೂರು ನಗರದ ಕೋಣನಕುಂಟೆ ಪೊಲೀಸ್ ಠಾಣೆ ಸರಹದ್ದಿನ “ಕೋಣನಕುಂಟೆ ಕಲ್ಬರಲ್ ಅಸೋಸಿಯೇಷನ್ ಕ್ಲಬ್” ನಲ್ಲಿ ಸದಸ್ಯರಲ್ಲದವರು ಸುಮಾರು 20-23 ಜನರು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟ್ ಎಲೆಗಳಿಂದ ಅದೃಷ್ಟದ ಜೂಜಾಟವನ್ನು ಆಡುತ್ತಿದ್ದಾರೆಂಬ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ, ದಿನಾಂಕ: 10.12.2023 ರಂದು ಸಿಸಿಬಿ ಪೊಲೀಸರು ದಾಳಿ ಮಾಡಿ. ಜೂಜಾಟದಲ್ಲಿ ತೊಡಗಿದ್ದ 26 ಜನ ಆರೋಪಿತರನ್ನು ಮತ್ತು ಜೂಜಾಟಕ್ಕೆ ಸಂಬಂಧಪಟ್ಟ ₹ 1.01.280 ನಗದು ಹಣ ಮತ್ತು ಇಸ್ಪೀಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದೇ ಪ್ರಕಾರ ಬೆಂಗಳೂರು ನಗರದ ಪುಲಕೇಶಿನಗರ ಪೊಲೀಸ್ ಠಾಣೆ ಸರಹದ್ದಿನ “ಯಂಗ್ ಮ್ಯಾನ್ ಇಂಡಿಯನ್ ಅಸೋಸಿಯೇಷನ್ (ವೈ.ಎಂ.ಐ.ಎ) ಆವರಣದಲ್ಲಿರುವ ಇಂಡಿಯನ್ ಪೋಕರ್ ಅಸೋಸಿಯೇಷನ್ (ಐಪಿಎ)” ನಲ್ಲಿ ಅಂದರ್-ಬಾಹರ್ ಜೂಜಾಟವನ್ನು ಆಡುತ್ತಿದ್ದಾರೆಂಬ ದೊರೆತ ಖಚಿತ ಮಾಹಿತಿ ಮೇರೆಗೆ, ದಿನಾಂಕ:11.12.2023 ರಂದು ಸಿಸಿಬಿ ಪೊಲೀಸರು ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ್ದ 46 ಜನ ಆರೋಪಿತರನ್ನು ಮತ್ತು ಜೂಜಾಟಕ್ಕೆ ಸಂಬಂಧಪಟ್ಟ ₹ 2.29.700 ನಗದು ಹಣ, 6 ಕಟ್ಟು ಇಸ್ಪೀಟ್ ಕಾರ್ಡ್‌ಗಳು, ಪೋಕರ್ ಸ್ಪೀಕ್ ಕೂಪನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ದ ಪುಲಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿ ಕೈಗೊಂಡಿರುತ್ತಾರೆ.