ಮೈಸೂರು ನಗರ ವ್ಯಾಪ್ತಿಯಲ್ಲಿ ವರದಿಯಾಗಿರುವ ದ್ವಿಚಕ್ರ ವಾಹನ ಕಳವು ಪ್ರಕರಣಗಳ ಪತ್ತೆ ಸಂಬಂಧ ನಗರ ಪೊಲೀಸ್ ಆಯುಕ್ತರು ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳ ವಿಶೇಷ ತಂಡವನ್ನೂ ರಚಿಸಿತ್ತು ಈ ತಂಡವು ದಿನಾಂಕ 06-08-2021ರಂದು ಖಚಿತ ವರ್ತಮಾನದ ಮೇರೆಗೆ ಮೈಸೂರು ನಗರದ ರಾಜೀವ್ ನಗರ ಅಲ್ ಬದರ್ ಮಸೀದಿ ಬಳಿ ಮೊದಲನೆಯ ಆರೋಪಿ ವಶಕ್ಕೆ ಪಡೆದು ದಿನಾಂಕ06-08-2021 ರಂದು ಮತ್ತೊಬ್ಬ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮಾಡಲಾಗಿ ಎರಡನೇ ಆರೋಪಿಯ ಮೇರೆಗೆ ಒಂದನೇ ಆರೋಪಿಯು ಮೈಸೂರು ನಗರದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದ್ವಿಚಕ್ರ ವಾಹನಗಳ ಕಳ್ಳತನ ಮಾಡಿರುವುದಾಗಿ ತಿಳಿಸಿದರ ಮೇರೆಗೆ ಆರೋಪಿಯಿಂದ ರೂ4,00,000/- ಗಳ ಮೌಲ್ಯದ 6ರಿಂದ ದ್ವಿಚಕ್ರ ವಾಹನಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ .ಒಂದನೇ ಆರೋಪಿ ಕಳ್ಳತನ ಮಾಡಿ ತರುತ್ತಿದ್ದ ದ್ವಿಚಕ್ರವಾಹನಗಳನ್ನು ಎರಡನೇ ಆರೋಪಿ ವಿಲೇವಾರಿ ಮಾಡುತ್ತಿದ್ದ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿರುತ್ತದೆ .
ಈ ಕಾರ್ಯಾಚರಣೆಯನ್ನು ಮೈಸೂರು ನಗರ ಡಿ.ಸಿ.ಪಿ. ಶ್ರೀಮತಿ .ಗೀತಾ ಪ್ರಸನ್ನ ರವರು ಮತ್ತು ಸಿ.ಸಿ.ಬಿ.ಯ ಎ.ಸಿ.ಪಿ ಶ್ರೀ ಸಿ. ಕೆ. ಅಶ್ವತ್ಥ ನಾರಾಯಣ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆರ್. ಜಗದೀಶ್ ಹಾಗೂ ಸಿಬ್ಬಂದಿಗಳು ಮಾಡಿರುತ್ತಾರೆ .
ಈ ಪತ್ತೆ ಕಾರ್ಯ ವನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಡಾ॥ ಚಂದ್ರಗುಪ್ತಾ ಐ.ಪಿ.ಎಸ್ .ರವರು ಪ್ರಸಂಶಿಸಿರುತ್ತಾರೆ .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,