ಬೆಂಗಳೂರು ನಗರ ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು 2013 ರಿಂದಲೂ ಸುಲಿಗೆ,ಕೊಲೆ ಪ್ರಯತ್ನ, ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ, ಆಶೋಕನಗರ ಪೋಲೀಸ್ ಠಾಣಾ ರೌಡಿಪಟ್ಟಿ ಆಸಾಮಿಯಾದ ಇರ್ಫಾನ್ – ರಹೀಮುಲ್ಲಾ 29 ವರ್ಷ, ಈತನನ್ನು ಕರ್ನಾಟಕ ಗೂಂಡಾ ಕಾಯಿದ ಅಡಿಯಲ್ಲಿ ಬಂಧನದಲ್ಲಿಡಲು ಸಿಸಿಬಿ ಸಂಘಟಿತ ಅಪರಾಧ ದಳದ ಅಧಿಕಾರಿಗಳು ಇನ್ನು ಕಳೆದ 10 ವರ್ಷಗಳಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧ ಪ್ರಕರಣ ದಾಖಲೆಗಳನ್ನು ಸಂಗ್ರಹಿಸಿ ಈತನನ್ನು ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು.
ಈತನ ವಿರುದ್ಧ ಈವರೆಗೆ ಸುಲಿಗೆ, ಕೊಲೆ ಪ್ರಯತ್ನ ಜೀವ ಬೆದರಿಕೆ ಸೇರಿದಂತೆ 15 ಪ್ರಕರಣಗಳು, ದಾಖಲಾಗಿರುತ್ತವೆ. ಈತನು ಜಾಮೀನು ಪಡೆದು ಬಿಡುಗಡೆ ನಂತರ 6 ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. ನ್ಯಾಯಾಲಯಗಳಿಂದ ಈತನ ವಿರುದ್ಧ ವಾರಂಟ್ ಗಳು ಬಾಕಿ ಉಳಿದಿದ್ದವು, ಸಿಸಿಬಿ ಅಧಿಕಾರಿಗಳು ಸತತ ಪ್ರಯತ್ನದಿಂದ ತಲೆ ಮರೆಸಿಕೊಂಡಿದ್ದ ರೌಡಿ ಆಸಾಮಿಯನ್ನು ಕೊಲೆ ಪ್ರಯತ್ನ ಕೇಸಿನ ವಾರಂಟ್ ನಲ್ಲಿ ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಗೂಂಡಾ ಕಾಯ್ದೆ ಬಂಧನ ಆದೇಶ ನೀಡಲು ಪ್ರಸ್ತಾವನೆ ಸಲ್ಲಿಸಿದ್ದರು.
ಸಿಸಿಬಿ ಅಧಿಕಾರಿಗಳ ಪ್ರಸ್ತಾವನೆಯನ್ನು ಪರಿಶೀಲಿಸಿದ ಪೊಲೀಸ್ ಆಯುಕ್ತರು, ದಿನಾಂಕ 25.08,2023 ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಅವರಂತೆ ಸಿಸಿಬಿ ಅಧಿಕಾರಿಗಳು ಬಂಧನ ಆದೇಶವನ್ನು ಕಾರಾಗೃಹದಲ್ಲಿ ಜಾರಿಗೊಳಿಸಿರುತ್ತಾರೆ.