ಆನ್-ಲೈನ್ ಬೆಟ್ಟಿಂಗ್ ಗಾಗಿ ತನ್ನ ಮನೆಯಲ್ಲಿರುವ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನ ಮಾಡಿದ್ದ, ಆರೋಪಿಯ ಬಂಧನ : ಸಿದ್ದಾಪುರ ಪೊಲೀಸ್ ಠಾಣೆಯ ಕಾರ್ಯಾಚರಣೆ
ಬೆಂಗಳೂರು ನಗರ, ಸಿದ್ದಾಪುರ ಪೊಲೀಸ್ ಠಾಣಾ ಸರಹದ್ದಿನ, ಜಯನಗರ 1ನೇ ಬ್ಲಾಕ್, ಪಿರ್ಯಾದುದಾರರ ತಮ್ಮನಾದ ಆರೋಪಿಯು, ಆನ್-ಲೈನ್ ಬೆಟ್ಟಿಂಗ್ ಗಾಗಿ ಮನೆಯಲ್ಲಿ ಯಾರೂ ಇಲ್ಲದ ಇರುವುದನ್ನು ಗಮನಿಸಿ, ರೂಂ ನಲ್ಲಿನ ಕಬೋರ್ಡ್‌ನಲ್ಲಿ ಇಟ್ಟಿದ್ದ ಚಿನ್ನ, ಬೆಳ್ಳಿ, ನಗದು ಹಾಗೂ ವಾಚ್ ಕಳ್ಳತನ ಮಾಡಿದ್ದು, ಈ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದ್ದು, ಕಾರ್ಯಪ್ರವೃತ್ತಾರಾದ ಪೊಲೀಸರು ಆರೋಪಿತ ಆಸಾಮಿಯನ್ನು ಬಂಧಿಸಿ, ಆತನಿಂದ 78.3 ಗ್ರಾಂ ಚಿನ್ನದ ಒಡವೆಗಳು, 2880 ಗ್ರಾಂ ಬೆಳ್ಳಿಯ ಒಡವೆಗಳು ಮತ್ತು ಒಂದುಲಾಂಗಿನ್ಸ್ ಮೆನ್ಸ್ ವಾಚ್‌ನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರ ಒಟ್ಟು ಮೌಲ್ಯ ರೂ.4,60,000 ರೂಪಾಯಿ.
ಬೆಂಗಳೂರು ನಗರ ದಕ್ಷಿಣ ವಿಭಾಗದ ಉಪ-ಪೊಲೀಸ್ ಆಯುಕ್ತರಾದ ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಕೆ.ವಿ.ಶ್ರೀನಿವಾಸ್ ರವರುಗಳ ಮಾರ್ಗದರ್ಶನದಲ್ಲಿ, ಸಿದ್ದಾಪುರ ಪೊಲೀಸ್ ಠಾಣಯ ಪೊಲೀಸ್ ಇನ್ಸ್‌ಪೆಕ್ಟರ್ ಹನುಮಂತ ಕೆ ಭಜಂತ್ರಿ ಹಾಗೂ ಸಿಬ್ಬಂದಿರವರುಗಳ ತಂಡ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ.ಎನ್.ಸತೀಶ್ ಕುಮಾರ್, ರವರು ಶ್ಲಾಘಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು