ವಿಧಾನಸೌಧ ಪೊಲೀಸ್ ಠಾಣಾ ಸರಹದ್ದಿನಲ್ಲಿ ರಾತ್ರಿ ಸಮಯದಲ್ಲಿ ಕಲಸ ಮುಗಿಸಿಕೊಂಡು ವನಗ ಹೋಗುತ್ತಿದ್ದ ಮಹಿಳೆಯನ್ನು ಅಡ್ಡಗಟ್ಟ ಅವರ ಕೈಯಲ್ಲಿದ್ದ ವಿವೋ ವಿ-5ಜಿ ವಲ್ ಪೋನ್‌ನ್ನು ಕಿತ್ತುಕೊಂಡು ಪರಾರಿಯಾಗಿದ್ದು, ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣವನ್ನು ಪತ್ತೆಹಚ್ಚಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಕಾರ್ಯೋನ್ಮುಖರಾಗಿ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ, ಆರೋಪಿಗಳ ಮಾಹಿತಿ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯ ಎರಡು ಸುಲಿಗೆ ಪ್ರಕರಣಗಳು ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಎರಡು ಸುಲಿಗೆ ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಗಳಿಂದ 3 ಮೊಬೈಲ್ ಫೋನ್‌ಗಳು ಹಾಗೂ ರೂ 5000 ನಗದು ಹಣವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಒಂದು ಸುಜುಕಿ ಆಕ್ಸಿಸ್ ದ್ವಿ ಚಕ್ರ ವಾಹನವನ್ನು ಅಮಾನತುಪಡಿಸಿಕೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ಶ್ರೀ ಶ್ರೀನಿವಾಸಗೌಡ, ಆರ್, ಐಪಿಎಸ್ ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ , ಎಸಿಪಿ ಶ್ರೀ ಡಿಎಸ್ ರಾಜೇಂದ್ರ ಕಬ್ಬನ್ ಪಾರ್ಕ್ ಉಪ ವಿಭಾಗ ರವರ ನೇತೃತ್ವದಲ್ಲಿ, ಶ್ರೀ ಕುಮಾರಸ್ವಾಮಿ, ಎಸ್.ಪಿ, ಇನ್ಸ್‌ಪೆಕ್ಟರ್, ಶ್ರೀ ಆನಂದ ಕಾಶಿ, ಸಬ್ ಇನ್ಸ್‌ಪಕ್ಟರ್ ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಬೇದಿಸವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಆಯುಕ್ತರು ಶ್ರೀ ಬಿ. ದಯಾನಂದ ಮತ್ತು ಇದರ ಪೂಆಫ್ ಆಯುಕ್ತರು ಪಶ್ಚಿಮ ಶ್ರೀ ಸತೀಶ್‌ಕಮಾರ್ ರವರು ಶ್ಲಾಗಿಸಿರುತ್ತಾರೆ.