ಬನಶಂಕರಿ ಪೊಲೀಸರಿಗೆ ದಿನಾಂಕ:-28/04/2023 ರಂದು ಶ್ರೀ.ರಾಘವೇಂದ್ರ ಆಚಾರ್ಯ ಎಂಬುವರು ದೂರನ್ನು ನೀಡಿದ್ದು, ಪಿದ್ಯಾದಿಗೆ ಪರಿಚಯವಿದ್ದ ಒಬ್ಬ ಆಸಾಮಿಯು ತಾನು ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುತ್ತಿದ್ದು, ವಿದ್ಯಾಥಿಯ ಬಳಿ ಇರುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ 20 ತಿಂಗಳಲ್ಲಿ ಹಣ ದ್ವಿಗುಣ ಮಾಡಿಕೊಡುತ್ತೇನೆಂದು ನಂಬಿಸಿರುತ್ತಾರೆ.
ಆರೋಪಿ ಆಸಾಮಿಯನ್ನು ನಂಬಿ ಆತನಿಗೆ 2022 ನೇ ಇಸವಿಯಲ್ಲಿ ಒಟ್ಟು 1,07 ಕೋಟಿ ರೂಗಳನ್ನು ನೀಡಿದ್ದು ಅಲ್ಲದೆ, ಪಿರಾದಿಯ ಮನೆಯನ್ನು ಸಹ ಸೇಲ್ ಆಗ್ರೀಮೆಂಟ್ ಮಾಡಿಕೊಂಡು, ಸದರಿ ಸ್ವತ್ತಿನ ಮೇಲೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಳ್ಳಲು ಪ್ರಯತ್ನಿಸಿರುತ್ತಾನೆ. ನಂತರ ಆರೋಪಿಯು ಆತನ ಕಛೇರಿಯನ್ನು ಹಾಗೂ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುತ್ತಾನೆ. ದಾಖಲಾಗಿರುತ್ತದೆ. ಈ ಬಗ್ಗೆ ಮೋಸ ವಂಚನೆ ಪ್ರಕರಣ
ತನಿಖೆಯನ್ನು ಮುಂದುವರಿಸಿದ ತನಿಖಾಧಿಕಾರಿಗಳು ಆರೋಪಿ ಆಸಾಮಿಯನ್ನು ದಿನಾಂಕ:-01/07/2023
ರಂದು ಚೆನ್ನೈ ಹೊರವಲಯದ ಮನೆಯಲ್ಲಿ ವಶಕ್ಕೆ ತೆಗೆದುಕೊಂಡು ದಸ್ತಗಿರಿ ಮಾಡಲಾಗಿರುತ್ತದೆ.
ಆರೋಪಿಯ ವಶದಿಂದ 2 ಲ್ಯಾಪ್‌ಟ್ಯಾಪ್‌ಗಳು ಹಲವಾರು ದಾಖಲಾತಿಗಳು ಮತ್ತು ರೂ.45 ಲಕ್ಷ ನಗದು ಹಣವನ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಹಾಲಿ ಕೇಂದ್ರ ಕಾರಾಗೃಹದಲ್ಲಿ ನ್ಯಾಯಂಗ ಬಂಧನದಲ್ಲಿರುತ್ತಾನೆ, ಬೆಂಗಳೂರು ನಗರ, ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಪಿ.ಕೃಷ್ಣಕಾಂತ್, ಮತ್ತು ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಕೆ.ವಿ.ಶ್ರೀನಿವಾಸ್ ರವರ ಮಾರ್ಗದರ್ಶನದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಗಿರೀಶ್ ನಾಯ್ಕ.ಸಿ ರವರ ನೇತೃತ್ವದ ಸಿಬ್ಬಂದಿಯವರ ತಂಡ ಆರೋಪಿಯನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ರವರು ಮತ್ತು ಪಶ್ಚಿಮ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ. ಎನ್.ಸತೀಶ್‌ಕುಮಾರ್\’ ರವರು ಶ್ಲಾಘಿಸಿರುತ್ತಾರೆ.