ಚಿಕ್ಕಮಗಳೂರು ಶೃಂಗೇರಿಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಯುವತಿಯ ಮೇಲೆ ಆಸಿಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ನಾಲ್ವರು ಆರೋಪಿಗಳು ತಪ್ಪಿತಸ್ಥರು ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಕಾಯ್ದಿರಿಸಿದ್ದು ಜು.15 ಪ್ರಕಟಿಸಲಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್.ಮಮತಾ ತಿಳಿಸಿದ್ದಾರೆ.
ತೀರ್ಪು ಹೊರ ಬೀಳುತ್ತಿದ್ದಂತೆ ನಾಲ್ಕು ಮಂದಿ ಆರೋಪಿಗಳನ್ನು ಫೋಲೀಸರು ವಶಕ್ಕೆ ಪಡೆದು ಜೈಲಿಗೆ ಕಳಿಸಿದ್ದಾರೆ. ಗಣೇಶ್ (36), ಮಹಮ್ಮದ್ ಕಬೀರ್ (31), ವಿನೋದ್ ಕುಮಾರ್(38), ಅಬ್ದುಲ್ ವಾಜೀದ್(37) ಪ್ರಕರಣದ ಆರೋಪಿಗಳು. ಪ್ರಕರಣದ ಹಿನ್ನೆಲೆ 2015ರ ಏಪ್ರಿಲ್ 18ರಂದು ಶೃಂಗೇರಿ ತಾಲೂಕಿನ ಮೆಣಸೇ ಗ್ರಾಮದ ಗಣೇಶ್ ಎಂಬಾತ ಮದುವೆಯಾಗುವಂತೆ ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದಿದ್ದರು. ಒಂದೇ ಗ್ರಾಮ ದವರಾದ ಇವರಿಬ್ಬರಿಗೂ ಪರಸ್ಪರ ಪರಿಚಯವಿತ್ತು ಮಹಿಳೆ ಮದುವೆಗೆ ತಿರಸ್ಕರಿಸಿದಾಗ ಅವರಿಗೆ ಬೆದರಿಕೆ ಒಡ್ಡಿದ್ದರು.ಅಂದಿನ ವೃತ್ತ ನಿರೀಕ್ಷಕರಾದ ಸುಧೀರ್ ಎಂ ಹೆಗ್ಡೆ ನೇತೃತ್ವದಲ್ಲಿ ತನಿಖೆ ನಡೆಸಿ 24ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಶೃಂಗೇರಿಯಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು. ಗಣೇಶ್ ಮೊಬೈಲ್ ಫೋನ್ ಅಂಗಡಿ ಇಟ್ಟುಕೊಂಡಿದ್ದರು. ಏನಾದರೂ ಮಾಡಿ ಮಹಿಳೆಯನ್ನು ಮದುವೆ ಯಾಗಲು ಸಾಧ್ಯವಾಗದೇ ಇದ್ದಾಗ ಗಣೇಶ್ ಮೂವರೊಂದಿಗೆ ಸೇರಿ ಆಸಿಡ್ ದಾಳಿ ಸಂಚು ರೂಪಿಸಿದ ಎಂದು ಇವರ ಮೇಲೆ ಆರೋಪಿಸಲಾಗಿತ್ತು.ಅಂದು ರಾತ್ರಿ 8.45 ದ್ವಿಚಕ್ರವಾಹನದಲ್ಲಿ ಮಹಿಳೆ ಬ್ಯೂಟಿ ಪಾರ್ಲರ್ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಆರೋಪಿಗಳು ವಿಳಾಸ ಕೇಳುವ ಸೋಗಿನಲ್ಲಿ ಮಹಿಳೆಯನ್ನು ಮಾತನಾಡಿಸಿ ಆಸಿಡ್ ಎರಚಿದರು ಎಂದು ಆರೋಪಿಸಲಾಗಿತ್ತು. ದಾಳಿಯಲ್ಲಿ ಬಲಗಣ್ಣು ಪೂರ್ಣ ಸುಟ್ಟಿದೆ ಎಡಗಣ್ಣು ಭಾಗಶಃ ಹಾನಿಯಾಗಿದೆ. ಮೈ ಕೈ ಕಾಲು ಸುಟ್ಟಿದೆ. ಈ ಸಂಬಂಧ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೋನ್ ಕರೆ ವಿವರಗಳಿಂದ ಸಂಚು ಕೃತ್ಯದ ಜಾಡು ಪತ್ತೆ ಹಚ್ಚಲಾಗಿದೆ ಇನ್ಸ್‍ಪೆಕ್ಟರ್ ಸುದೀಪ್ ಹೆಗಡೆ ಪ್ರಕರಣದ ತನಿಖೆ ನಡೆಸಿ ಕೋರ್ಟಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಿವರಿಸಿದರು. ಈಗ ಸಂತ್ರಸ್ತ ವಿಚ್ಛೇದಿತ ಮಹಿಳೆಯು ಚಿಕ್ಕಮಗಳೂರಿನ ಸರ್ಕಾರಿ ಕಚೇರಿಯೊಂದರಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ ಮಹಿಳೆಗೆ ಒಬ್ಬ ಮಗ ಇದ್ದಾನೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್