ಬೆಂಗಳೂರು ನಗರ ಪಶ್ಚಿಮ ವಿಭಾಗದ ವಿಜಯನಗರ ಉಪ ವಿಭಾಗದ ಪೊಲೀಸ್ ಠಾಣೆಗಳಲ್ಲಿ 2023ನೇ ಸಾಲಿನ ಅಕ್ಟೋಬರ್ & ನವೆಂಬರ್ ತಿಂಗಳಿನಲ್ಲಿ ವಿವಿಧ ಪ್ರಕರಣಗಳಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಿ ಈ ಕೆಳಕಂಡ ಮಾಲುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿರುತ್ತದೆ.
ಗೋವಿಂಧರಾಜನಗರ ಪೊಲೀಸ್ ಠಾಣೆಯ ಸ್ವತ್ತು ಕಳುವು ಪ್ರಕರಣದ ಪೈಕಿ 3 ಜನ ಆರೋಪಿಗಳನ್ನು ವಶಕ್ಕೆ ಪಡೆದು ಆರೋಪಿಗಳ ಮಾಹಿತಿ ಮೇರೆಗೆ ಕನ್ನ ಕಳವು ಪ್ರಕರಣಗಳಿಗೆ ಸಂಬಂದಿಸಿದ ಸುಮಾರು 70,00,000/- ರೂ ಮೌಲ್ಯದ 1 ಕೆಜಿ 215 ಗ್ರಾಂ ತೂಕದ ಚಿನ್ನಾಭರಣಗಳನ್ನು ಮತ್ತು 3 ಕೆಜಿ 500 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಅಮಾನತ್ತುಪಡಿಸಿಕೊಂಡಿದ್ದು 2005 ರಿಂದ ಇಲ್ಲಿಯವರೆಗೆ 83 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತರ್‌ರಾಜ್ಯ ಆರೋಪಿಯನ್ನು ದಸ್ತ ಮಾಡಲಾಗಿರುತ್ತೆ. ಈ ಕೆಳಕಂಡ ಠಾಣೆಗಳ ಒಟ್ಟು 13 ಪ್ರಕರಣಗಳನ್ನು ಪತ್ತೆ ಮಾಡಲಾಗಿರುತ್ತೆ.
1) ಗೋವಿಂದರಾಜನಗರ ಪೊಲೀಸ್ ಠಾಣೆಯ 4 ಪ್ರಕರಣಗಳು,
2) ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯು ಒಟ್ಟು 3 ಪ್ರಕರಣಗಳು,
3) ಕೊತ್ತನೂರು ಪೊಲೀಸ್ ಠಾಣೆಯ 1 ಪ್ರಕರಣ,
4) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ 2 ಪ್ರಕರಣ,
5) ಮಾಗಡಿ ರಸ್ತೆ ಪೊಲೀಸ್ ಠಾಣೆಯ 2 ಪ್ರಕರಣಗಳು,
6) ಬೆಂಗಳೂರು ಗ್ರಾಮಾಂತರ ಜಿಲ್ಲೆ ಅವಲಹಳ್ಳಿ ಪೊಲೀಸ್ ಠಾಣೆಯ ಒಂದು ಪ್ರಕರಣ 2) ಗೋವಿಂಥರಾಜನಗರ ಪೊಲೀಸ್ ಠಾಣೆಯ ಮತ್ತೊಂದು ಸ್ವತ್ತು ಕಳುವು ಪ್ರಕರಣದ ಪೈಕಿ ವಶಕ್ಕೆ ಪಡೆದು ಆರೋಪಿ ಮಾಹಿತಿ ಮೇರೆಗೆ ರೂ. 7,65,000/- ಮೌಲ್ಯದ 107 ಗ್ರಾಂ 1,14,500/- ರೂ ನಗದು ಹಣ ಅಮಾನತ್ತುಪಡಿಸಿಕೊಂಡಿರುತ್ತ.
ಒಬ್ಬ ಆರೋಪಿಯನ್ನು ಚಿನ್ನಾಭರಣಗಳು ಮತ್ತು
8) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಸ್ವತ್ತು ಕಳುವು ಪ್ರಕರಣದ ಪೈಕಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಮಾಹಿತಿ ಮೇರೆಗೆ ಸುಮಾರು ರೂ 20,60,000/- ಮೌಲ್ಯದ 374.7 ಗ್ರಾಂ ತೂಕದ ಚಿನ್ನಾಭರಣಗಳು ಅಮಾನತ್ತುಪಡಿಸಿಕೊಂಡಿರುತ್ತೆ.
9) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಮತ್ತೊಂದು ಸ್ವತ್ತು ಕಳುವು ಪ್ರಕರಣದ ಪೈಕಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಮಾಹಿತಿ ಮೇರೆಗೆ ಸುಮಾರು ರೂ 11,96,400/- ಮೌಲ್ಯದ 199.4 ಗ್ರಾಂ ಚಿನ್ನಾಭರಣಗಳು ಅಮಾನತ್ತುಪಡಿಸಿಕೊಂಡಿರುತ್ತೆ.
10) ಬಸವೇಶ್ವರನಗರ ಪೊಲೀಸ್ ಠಾಣೆಯ ಸ್ವತ್ತು ಕಳುವು ಪ್ರಕರಣದ ಪೈಕಿ ಒಬ್ಬ ಆರೋಪಿಯನ್ನು ವಶಕ್ಕೆ ಪಡೆದು ರೂ. 4,85,000/- ಮೌಲ್ಯದ 97 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತೆ.
ಈ ಕಾರ್ಯಾಚರಣೆಯನ್ನು ಶ್ರೀ ಗಿರೀಶ್ ಎಸ್, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಪಶ್ಚಿಮ ವಿಭಾಗ ರವರ ನೇತೃತ್ವದಲ್ಲಿ ಶ್ರೀ.ಚಂದನ್ ಕುಮಾರ್ ಎನ್ ಸಹಾಯಕ ಪೊಲೀಸ್ ಆಯುಕ್ತರು, ವಿಜಯನಗರ ಉಪವಿಭಾಗರವರ ಮಾರ್ಗದರ್ಶನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ.ಜಿ.ಎನ್.ನಾಗೇಶ್, ಗೋವಿಂದರಾಜನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀ ಸುಬ್ರಮಣಿ..ಕೆ ಮತ್ತು ಬಸವೇಶ್ವರನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ಚಿಕ್ಕಸ್ವಾಮಿ ರವರ ಸಾರಥ್ಯದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂದಿಸಿ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.