ಸಂಚಾರ ಉತ್ತರ ವಿಭಾಗದ ವಿವಿಧ ಪೊಲೀಸ್ ಠಾಣಾ ಸರಹದ್ದಿನ ರಸ್ತೆಗಳಲ್ಲಿ ವಿಲೀಂಗ್ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಕಾರ್ಯ ಪ್ರವೃತ್ತರಾದ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಚಿನ್ ಪಿ ಘೋರ್ಪಡೆ ಹಾಗೂ ಅವರ ಅಧಿಕಾರಿ ಸಿಬ್ಬಂದಿಯವರ ತಂಡಗಳು, ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿಕೊಂಡು, ವಿಲಿಂಗ್ ಮಾಡುವವರ ವಿರುದ್ಧ ಕ್ರಮ ಕೈಗೊಂಡಿರುತ್ತಾರೆ.
ವಿಲೀಂಗ್ ಮಾಡುವವರ ವಿರುದ್ಧ ಪೀಣ್ಯ, ಚಿಕ್ಕಜಾಲ, ಹೆಬ್ಬಾಳ, ಮತ್ತು ರಾಜಾಜಿನಗರ
ಸಂಚಾರ ಪೊಲೀಸ್ ಠಾಣೆಗಳಲ್ಲಿ ತಲಾ 0 ಪ್ರಕರಣಗಳು ಹಾಗೂ ಯಲಹಂಕ ಸಂಚಾರ
ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಒಟ್ಟು 06: ಪ್ರಕರಣಗಳನ್ನು
ದಾಖಲಿಸಿ, 6 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 06 ಆರೋಪಿತರ ಪೈಕಿ, 5 ಜನ 18 ವರ್ಷಕ್ಕಿಂತ
ಮೇಲ್ಪಟ್ಟವರು ಹಾಗೂ ಒಬ್ಬ ಅಪ್ರಾಪ್ತರಾಗಿರುತ್ತಾರೆ.
ಆರೋಪಿಗಳ ವಾಹನಕ್ಕೆ ಸಂಬಂಧಿಸಿದ ಆರ್.ಸಿ.ಯನ್ನು ರದ್ದುಗೊಳಿಸಲು ಹಾಗೂ
ಡ್ರೈವಿಂಗ್ ಲೈಸೆನ್ಸ್ ಅಮಾನತ್ತುಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ. ಬಿ.ದಯಾನಂದ ಹಾಗೂ ಜಂಟಿ ಪೊಲೀಸ್ ಆಯುಕ್ತರು ಸಂಚಾರ ಶ್ರೀ. ಎಂ.ಎನ್.ಅನುಚೇತ್ ರವರು ಈ ರೀತಿ ವಿಲೀಂಗ್ ಮಾಡುವವರ ವಿರುದ್ಧ ಬೆಂಗಳೂರಿನಾದ್ಯಂತ ಕಾರ್ಯಾಚರಣೆಯನ್ನು ಮುಂದುವರೆಸ ಲಾಗುವುದೆಂದು ತಿಳಿಸಿರುತ್ತಾರೆ.