ಸದಾಶಿವ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿರುವ ಪಿರಾದುದಾರರು ರಾಮಯ್ಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದು, ಸದರಿಯವರಿಗೆ ದಿನಾಂಕ: 16.07.2023 ರಂದು ರಾತ್ರಿ ಸುಮಾರು 9.00 ಗಂಟೆಯ ಸಮಯದಲ್ಲಿ ನಾವು ಸೈಬರ್ ಕ್ರೈಂ ಪೊಲೀಸ್ ರವರು ಎಂದು ಕರೆ ಮಾಡಿ, ಪಿರಾದುದಾರರನ್ನು ಕರೆದು, ಕಾರಿನಲ್ಲಿ ಕೂರಿಸಿಕೊಂಡು ಪಿರಾದುದಾರರಿಗೆ ನೀವು ಗಾಂಜಾ ಮತ್ತು ಮಾದಕ ವಸ್ತುಗಳನ್ನು ಸೇವಿಸಿದ್ದೀರಿ ಎಂದು ಹೆದರಿಸಿ, ಮೊಬೈಲ್ ಫೋನ್‌ನನ್ನು ಕಿತ್ತುಕೊಂಡು ಆಕ್ಸಿಸ್ ಬ್ಯಾಂಕ್ ಅಕೌಂಟ್ ಖಾತೆಯಿಂದ 1,71,000/- ರೂಗಳನ್ನು ಅಪರಿಚಿತರು ವರ್ಗಾಯಿಸಿಕೊಂಡು ದಿನಾಂಕ: 17.07.2023 ರಂದು ರಾತ್ರಿ ಸುಮಾರು 12.30 ಗಂಟೆಗೆ ಕಾರ್ ನಿಂದ ಕೆಳಗೆ ಇಳಿಸಿ ಈ ವಿಚಾರವನ್ನು ಯಾರ ಹತ್ತಿರನೂ ಶೇರ್ ಮಾಡಬೇಡ, ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯಿಸುತ್ತೇವೆಂದು ಬೆದರಿಕೆ ಹಾಕಿರುವ ಬಗ್ಗೆ ಸದಾಶಿವ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣವನ್ನು ಪತ್ತೆಹಚ್ಚಲು ಒಂದು ವಿಶೇಷ ತಂಡವನ್ನು ರಚಿಸಿದ್ದು, ಈ ವಿಶೇಷ ತಂಡವು ಕಾರ್ಯೋನ್ಮುಖರಾಗಿ ಇಬ್ಬರು ಆರೋಪಿಗಳನ್ನು ದಿನಾಂಕ: 20,07,2023 ರಂದು ರಾತ್ರಿ 09.30 ಗಂಟೆಗೆ ದಸ್ತಗಿರಿ ಮಾಡಿರುತ್ತಾರೆ. ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿಯನ್ನು ದಸ್ತಗಿರಿಮಾಡಲಾಗಿರುತ್ತದೆ. ಆರೋಪಿಗಳ ವಶದಿಂದ ಕೃತ್ಯಕ್ಕೆ ಉಪಯೋಗಿಸಿದ 04 ಮೊಬೈಲ್ ಪೋನ್‌ಗಳು, ಮಾರುತಿ ಸುಜುಕಿ ಸಿಯಾಜ್ ಕಾರ್ ಹಾಗೂ 01 ರಾಯಲ್ ಎನ್‌ಪಿಲ್ಡ್, ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಕಾರ್ಯಾಚರಣೆಯನ್ನು ಶ್ರೀ ಶ್ರೀನಿವಾಸಗೌಡ ಆರ್, ಉಪ ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಬೆಂಗಳೂರು ನಗರ ರವರ ಮಾರ್ಗದರ್ಶನದಲ್ಲಿ, ಶೇಷಾದ್ರಿಪುರಂ ಉಪ ವಿಭಾಗದ ಎ.ಸಿ.ಪಿ ಚಂದನ್ ಕುಮಾರ್, ಎನ್. ರವರ ನೇತೃತ್ವದಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್, ಅನಿಲ್ ಕುಮಾರ್ ಎಂ ಎಸ್ ರವರು ಮತ್ತು ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಶ್ರೀ.ಬಿ.ದಯಾನಂದ ಮತ್ತು ಅಪರ ಪೊಲೀಸ್ ಆಯುಕ್ತರು ಪಶ್ಚಿಮ ಶ್ರೀ.ಎನ್.ಸತೀಶ್ ಕುಮಾರ್ ರವರು ಶ್ಲಾಘಿಸಿರುತ್ತಾರೆ.