01 ಆಪ್ಪೇ ಆಟೋ & 08 ದ್ವಿ-ಚಕ್ರ ವಾಹನಗಳ ವಶ ಇವುಗಳ ಮೌಲ್ಯ 105 ಲಕ್ಷ.wwwwww
ದೇವರಜೀವನಹಳ್ಳಿ ಪೊಲೀಸ್ ಸರಹದಿನ, ಪಿಳಣ್ಣ ಗಾರ್ಡನ್‌ನಲ್ಲಿ ವಾಸವಿರುವ ಫಿರಾದುದಾರರು, ದಿನಾಂಕ:15/04/2024 ರಂದು ಶಾಂಪುರ ಮುಖ್ಯರಸೆಯಲ್ಲಿರುವ ಫಂಕನ್ ಹಾಲ್ ಬಳಿ ದ್ವಿ-ಚಕ್ರ ವಾಹನವನ್ನು ನಿಲ್ಲಿಸಿ ಹೋಗಿದ್ದು, ವಾಪಸ್ಸು ಬಂದು ನೋಡಲಾಗಿ, ಯಾರೋ ಕಳ್ಳರು ಅವರ ದ್ವಿ- ಚಕ್ರ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತು ದಿನಾಂಕ:16/04/2024 ರಂದು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಿಸಿರುತ್ತಾರೆ.
ತನಿಖೆಯನ್ನು ಮುಂದುವರೆಸಿದ ಡಿ.ಜೆ.ಹಳ್ಳಿ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:11.06.2024 ಆರ್.ಟಿ.ನಗರದ ಕೆ.ಬಿ.ಸಂದ್ರ ಬಸ್ ನಿಲ್ದಾಣದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಲಾಯಿತು. ವಿಚಾರಣೆ ವೇಳೆಯಲ್ಲಿ ಆತನು ದ್ವಿ-ಚಕ್ರ ವಾಹನಗಳನ್ನು ಹಾಗೂ ಆಷ್ಟೇ ಆಟೋವನ್ನು ಕಳ್ಳತನ ಮಾಡಿರುವುದಾಗಿ ತಪೋಪಿಕೊಂಡಿರುತ್ತಾನೆ. ನಂತರ ಆತನ್ನು ನೀಡಿದ ಮಾಹಿತಿ ಮೇರೆಗೆ ಆತನ್ನು ಕಳ್ಳತನ ಮಾಡಿದ್ದ ವಾಹನಗಳನ್ನು ಡಿ.ಜಿ.ಹಳ್ಳಿ ಠಾಣಾ ಸರಹದಿನ ರಾಘವೇಂದ್ರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದು, ಆ ಸ್ಥಳದಿಂದ 1-ಆಪ್ಪೇ ಆಟೋ ಮತ್ತು 8 ದ್ವಿ-ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಅವುಗಳ ಒಟ್ಟು ಮೌಲ್ಯ 7 5,00,000/- (ಐದು ಲಕ್ಷ ರೂಪಾಯಿ), ನಂತರ ಆತನನ್ನು ದಿನಾಂಕ:12/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಿದ್ದು, ಮಾನ್ಯ ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತದೆ.
ಈ ಪ್ರಕರಣದಿಂದ ದೇವರಜೀವನಹಳ್ಳಿ ಪೊಲೀಸ್ ಠಾಣೆಯ-3 ದ್ವಿಚಕ್ರ & 1 ಆಪೇ ಆಟೋ ವಾಹನ ಕಳವು ಪ್ರಕರಣ, ಗೋವಿಂದಪುರ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ, ಪುಲಕೇಶಿನಗರ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ, ಭಾರತಿನಗರ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ, ಪುರಂ ಪೊಲೀಸ್ ಠಾಣೆಯ-1 ದ್ವಿಚಕ್ರ ವಾಹನ ಹಾಗೂ ಬೇಗೂರು ಪೊಲೀಸ್ ಠಾಣೆಯ-01 ದ್ವಿಚಕ್ರ ವಾಹನ ಸೇರಿ ಒಟ್ಟು 08-ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.
ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ-ಪೊಲೀಸ್ ಆಯುಕ್ತರು ಶ್ರೀ. ಕುಲದೀಪ್ ಕುಮಾರ್ ಆರ್ ಜೈನ್, ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ ಕೆ.ಜಿ.ಹಳ್ಳಿ ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಪ್ರಕಾಶ್ ರಾಠೋಡ್ ರವರ ನೇತೃತ್ವದಲ್ಲಿ ದೇವರಜೀವನಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್‌ಪೆಕರ್ ಶ್ರೀ ಸುನೀಲ್ ಹೆಚ್.ಬಿ ಹಾಗೂ ಅಧಿಕಾರಿ/ಸಿಬ್ಬಂದಿಗಳ ತಂಡ ಪಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತದೆ.