ಹನುಮಂತನಗರ ಮತ್ತು ಕೆ,ಜಿನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಜನವಸತಿ ಪ್ರದೇಶಗಳಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ, ರಾಯಲ್ ಎನ್ ಫೀಲ್ಡ್ ಬುಲೆಟ್ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ದಿನಾಂಕ:03/08/2023 ರಂದು ಹನುಮಂತನಗರ ಠಾಣೆಯ ಪೊಲೀಸರು ಬಂಧಿಸಿ, ಒಟ್ಟು ಅಂದಾಜು ಮೌಲ್ಯದ 3,00,000/- ಬೆಲೆಬಾಳುವ 2 ಬುಲೆಟ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಆಂದ್ರಪ್ರದೇಶದಲ್ಲಿ ಇಂಜಿನಿಯರಿಂಗ್ ಪದವೀದರರಾಗಿದ್ದು, ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದು, ವಿಲಾಸಿ ಜೀವನಕ್ಕಾಗಿ ಇಬ್ಬರು ಸೇರಿಕೊಂಡು ಬುಲೆಟ್ ವಾಹನಗಳನ್ನು ಕಳ್ಳತನ ಮಾಡಿ ಸ್ವಂತ ವಿಳಾಸವಾದ ಆಂದ್ರಪ್ರದೇಶದ ನೆಲ್ಲೂರು ಬಳಿ ತೆಗೆದುಕೊಂಡು ಹೋಗಿದ್ದು, ಪೊಲೀಸರು ತನಿಖಾ ಕಾಲದಲ್ಲಿ ತಾಂತ್ರಿಕತೆಯ ಮುಖಾಂತರ ಪತ್ತೆ ಮಾಡಿ, ಆರೋಪಿಗಳನ್ನು ಆಂಧ್ರಪ್ರದೇಶ ನೆಲ್ಲೂರು ಹತ್ತಿರ ಬಂಧಿಸಿರುತ್ತಾರೆ.
ಬೆಂಗಳೂರು ನಗರದ ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು ಶ್ರೀ.ಪಿ.ಕೃಷ್ಣಕಾಂತ್, ಐ.ಪಿ.ಎಸ್, ವಿ.ವಿ.ಪುರಂ ಉಪವಿಭಾಗದ ಎ.ಸಿ.ಪಿ ಶ್ರೀ.ಜಿ.ನಾಗರಾಜ ರವರುಗಳ ಮಾರ್ಗದರ್ಶನದಲ್ಲಿ, ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಶ್ರೀ.ವಿನೋದ್ ಭಟ್ ಹಾಗೂ ಸಿಬ್ಬಂದಿರವರುಗಳ ತಂಡ ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.
ವರದಿ : ಆಂಟೋನಿ ಬೇಗೂರು