ಮತಿ ಲಲಿತ್ ದಿನೇಶ್‌ರವರು ತಮ್ಮ ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನವನ್ನು ದಿನಾಂಕ: 24.05.2023 ರಂದು ರಾತ್ರಿ ಕೆ.ಎಸ್.ಲೇಔಟನ ವಿಠಲನಗರದಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ಮರುದಿನ ಬೆಳಿಗ್ಗೆ ನೋಡಲಾಗಿ ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಪಿರಾದುದಾರರು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿಸಿಕೊಂಡು ಕಾರ್ಯಪ್ರವೃತ್ತರಾದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾಧಿಕಾರಿಗಳು ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಮನೆಗಳ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಲಾಕ್‌ನ್ನು ಮುರಿದು ಕಳವು ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ದಸ್ತಗಿರಿವಾಡಿ ಆರೋಪಿಗಳ ಮಾಹಿತಿ ಮೇರೆಗೆ ದ್ವಿ ಚಕ್ರ ವಾಹನ ಕಳವು ಪ್ರಕರಣಗಳಿಗೆ ಸೇರಿದ ಒಟ್ಟು 6,00,000/- ರೂ ಮೌಲ್ಯದ 12 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಮೇಲ್ಕಂಡ ಪ್ರಕರಣಗಳ ಪತ್ತೆ ಮತ್ತು ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಶ್ರೀ.ಪಿ.ಕೃಷ್ಟ ಕಾoತ್ ಮಾನ್ಯ ಉಪ ಪೊಲೀಸ್ ಆಯುಕ್ತರು, ದಕ್ಷಿಣ ವಿಭಾಗ ರವರ ಮಾರ್ಗದರ್ಶನದಲ್ಲಿ, ಶ್ರೀ.ಪವನ್.ಎನ್ ಸಹಾಯಕ ಪೊಲೀಸ್ ಆಯುಕ್ತರು ಸುಬ್ರಮಣ್ಯಪುರ ಉಪ-ವಿಭಾಗ ರವರ ನೇತೃತ್ವದಲ್ಲಿ ಕುಮಾರಸ್ವಾಮಿ ಲೇಔಟ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಕೊಟ್ರೇಶಿ.ಬಿ.ಎಂ ಪಿ.ಎಸ್.ಐ.ಗಳಾದ ಶ್ರೀ.ಸತ್ಯಮೂರ್ತಿ,ಶ್ರೀ.ನಾಗರಾಜ್.ಹೆಚ್, ಹಾಗೂ ಸಿಬ್ಬ೦ದಿಯವರುಗಳು ಸೇರಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.