ಕನ್ನಡ ಭಾಷೆಯ ಕೆಲವು ಪ್ರಮುಖ ಸಾಹಿತಿಗಳಿಗೆ 2022ನೇ ಸಾಲಿನ ಏಪ್ರಿಲ್ ತಿಂಗಳಿನಿಂದ ನಿರಂತರವಾಗಿ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದು, ಈ ಪತ್ರಗಳಲ್ಲಿ ಸಾಹಿತಿಗಳಿಗೆ ಅವಾಚ್ಯವಾಗಿ ನಿಂದಿಸುತ್ತಾ ಕೋಮು ದ್ವೇಷದ ಭಾವನೆ ಉಂಟು ಮಾಡುವಂತಹ ಪದಗಳನ್ನು ಬಳಸಿ ಪತ್ರಗಳನ್ನು ಬರೆಯುತ್ತಿದ್ದು, ಈ ಬಗ್ಗೆ ಚಿತ್ರದುರ್ಗ (1 ಪ್ರಕರಣ), ಕೊಟ್ಟೂರು (I ಪ್ರಕರಣ), ಸಂಜಯ ನಗರ(1 ಪ್ರಕರಣ), ಹಾರೋಹಳ್ಳಿ(2 ಪ್ರಕರಣ), ಬಸವೇಶ್ವರ ನಗರ(2 ಪ್ರಕರಣ), ಪೊಲೀಸ್ ಠಾಣೆ ಸೇರಿದಂತೆ ಒಟ್ಟು 7 ಪ್ರಕರಣಗಳು ದಾಖಲಾಗಿರುತ್ತದೆ.
ಈ ಪ್ರಕರಣಗಳಲ್ಲಿನ ಎಲ್ಲಾ ಬೆದರಿಕೆ ಪತ್ರಗಳಲ್ಲಿ ಒಬ್ಬನೇ ವ್ಯಕ್ತಿಯ ಬರವಣಿಗೆ ಇದ್ದು, ರಾಜ್ಯದ ವಿವಿಧ ಜಿಲ್ಲೆಗಳ ಪೋಸ್ಟ್ ಆಫೀಸ್‌ನಿಂದ ಅರ್ಡನರಿ ಪೊಸ್ಟ್‌ಗಳನ್ನು ಮಾಡುತ್ತಾ, ಅಪರಾಧ ಕೃತ್ಯದಲ್ಲಿ ತೊಡಗಿಸಿಕೊಂಡು ಪೊಲೀಸರಿಗೆ ಸಿಗದೇ ಬೆದರಿಕೆ ಪತ್ರಗಳನ್ನು ಬರೆಯುವುದನ್ನು ಮುಂದುವರೆಸಿಕೊಂಡು ಬಂದಿರುತ್ತಾನೆ. ಈ ಸಂಬಂಧವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಈ ಎಲ್ಲಾ 7 ಪ್ರಕರಣಗಳನ್ನು ಮುಂದಿನ ತನಿಖೆಯ ಸಲುವಾಗಿ ಬೆಂಗಳೂರು ನಗರದ ಸಿಸಿಬಿ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು.
ಈ ಪ್ರಕರಣಗಳ ತನಿಖೆಯನ್ನು ಕೈಗೊಂಡ ಸಿ.ಸಿ.ಬಿ, ವಿಶೇಷ ವಿಚಾರಣಾ ದಳದ ತನಿಖಾ ತಂಡ ಪ್ರಕರಣಗಳು
ಸಿಸಿಬಿ ಘಟಕಕ್ಕೆ ವರ್ಗಾವಣೆಗೊಂಡ | ತಿಂಗಳಲ್ಲಿಯೇ ಆರೋಪಿತನ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ, ಆತನನ್ನು
ದಿನಾಂಕ: 28-09-2023 ರಂದು ದಾವಣಗೆರೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಈತನ ಬಂಧನದಿಂದ ಕಳೆದ
2 ವರ್ಷಗಳಿಂದ ಪತ್ತೆಯಾಗದೇ ಇದ್ದ 7 ಪ್ರಕರಣಗಳನ್ನು ಭೇದಿಸಿದ್ದು ಅಲ್ಲದೇ ಈತ ಮುಂದಿನ ದಿನಗಳಲ್ಲಿ ಬೆದರಿಕೆ ಪತ್ರಗಳಲ್ಲಿ ಬರೆದಿರುವಂತೆ ಸಾಹಿತಿಗಳಿಗೆ ಮಾಡಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದಂತಾಗಿರುತ್ತದೆ, ಈತನ ವಿರುದ್ಧ ಈ ಹಿಂದೆ 2 ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಇರುತ್ತದೆ.
ಆರೋಪಿತನ ವಿಚಾರಣೆಯಿಂದ ಈತನು ಈ ಸಾಹಿತಿಗಳಲ್ಲದೇ ಇನ್ನೂ ಹಲವಾರು ಸಾಹಿತಿಗಳಿಗೆ ಇದೇ ರೀತಿ ಬೆದರಿಕೆ ಪತ್ರಗಳನ್ನು ಬರೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿರುತ್ತದೆ. ಅಲ್ಲದೇ, ಈತನ ಈ ಕೃತ್ಯಕ್ಕೆ ಯಾರು ಯಾರು ಸಹಕಾರ ನೀಡಿರುತ್ತಾರೆ, ಮತ್ತು ಇವರುಗಳ ಯೋಜನೆ ಏನು, ಇವರು ಮಾಡಿಕೊಂಡಿರುವ ಸಿದ್ಧತೆ, ರೂಪುರೇಷೆಗಳ ಬಗ್ಗೆ ಆರೋಪಿತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸುವ ಸಲುವಾಗಿ 13 ದಿನಗಳ ಕಾಲ ಪೊಲೀಸ್ ಅಧೀರಕ್ಷೆಗೆ
ಪಡೆದುಕೊಳ್ಳಲಾಗಿದೆ.
ಈ ಕಾರ್ಯಚರಣೆಯನ್ನು ಸಿಸಿಬಿ, ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು
ಕೈಗೊಂಡಿರುತ್ತಾರೆ.