ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ತುರ್ತಾಗಿ ರಕ್ಷಣಾ ಕಾರ್ಯಚರಣೆಯನ್ನು ಕೈಗೊಳ್ಳಲು ರಾಜ್ಯ ವಿಪತ್ತು ಸ್ಪಂದನಾ ಪಡೆಯ (SDRF) ತಂಡಗಳನ್ನು ಜಿಲ್ಲೆಯ ಕಳಸ ಮತ್ತು ಬಾಳೆಹೊನ್ನೂರಿನಲ್ಲಿ ಇರಿಸಲಾಗಿರುತ್ತವೆ. ಸದರಿ ತಂಡಗಳು ಯಾವುದೇ ಪ್ರಕೃತಿ ವಿಪತ್ತಿನ ಸಮಯದಲ್ಲಿ ಜಿಲ್ಲೆಯಾದ್ಯಂತ ತುರ್ತಾಗಿ ರಕ್ಷಣಾ ಕಾರ್ಯಚರಣೆಯನ್ನು ಕೈಗೊಳ್ಳಲು ಸನ್ನದ್ಧರಾಗಿರುತ್ತವೆ.ದಿನಾಂಕ 31/07/2021 ರಂದು ಜಿಲ್ಲೆಯ ಮೂಡಿಗೆರೆ ತಾಲ್ಲೂಕ್ ಚೆನ್ನಡ್ಲು, ಬೂದಿಗುಂಡಿ, ಹಿರೇಬೈಲು ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ SDRF ಮತ್ತು PSI ಕಳಸ ಪೊಲೀಸ್ ಠಾಣೆ ರವರ ತಂಡ ಭೇಟಿ ನೀಡಿ, ಪ್ರಕೃತಿ ವಿಪತ್ತಿನ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡಿರುತ್ತಾರೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಆಗುತ್ತಿರುವ ಮಳೆಯಿಂದ ರಸ್ತೆಯ ಮೇಲೆ ಮರ ಬಿದ್ದು ಸಂಚಾರಕ್ಕೆ ಅಡಚಣೆ, ಭೂಕುಸಿತ ಮತ್ತು ಯಾವುದೇ ರೀತಿಯ ವಿಕೋಪಗಳು ಸಂಭವಿಸಿದ್ದಲ್ಲಿ, ಸಾರ್ವಜನಿಕರು 112 ಸಹಾಯವಾಣಿ ಗೆ ಕರೆ ಮಾಡುವಂತೆ ಕೋರಿದೆ. ನಿಮ್ಮ ಕರೆಗಳಿಗೆ ತುರ್ತಾಗಿ ಸ್ಪಂದಿಸಲಾಗುವುದು.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,