ದ್ಯಾರಣ್ಯಪುರ ಪೊಲೀಸ್ ಠಾಣಾ ಸರಹದ್ದಿನಲ್ಲಿ ದ್ವಿ-ಚಕ್ರ ವಾಹನಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿದ್ದರಿಂದ, ಆರೋಪಿತರ ಪತ್ತೆಗಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಒಂದು ವಿಶೇಷ ತಂಡ ರಚಿಸಿ, ಸದರಿ ಪ್ರಕರಣಗಳ ಪತ್ತೆಗಾಗಿ ಕಾರ್ಯಪ್ರವೃತ್ತರಾದ ವಿದ್ಯಾರಣ್ಯಪುರ ಪೊಲೀಸರು ಬೆಂಗಳೂರು ನಗರದ ವಿವಿದೆಡೆಗಳಲ್ಲಿ ದ್ವಿಚಕ್ರ ವಾಹನ ಕಳ್ಳರು ಕಳ್ಳತನ ಮಾಡುತ್ತಿದ್ದರು.ಕಾನೂನು ಸಂಘರ್ಷಕ್ಕೊಳಗಾದ 3 ಜನ ಬಾಲಕರೊಂದಿಗೆ ಸೇರಿಕೊಂಡು, ಮೋಜು ಮಸ್ತಿಗಾಗಿ ದ್ವಿ-ಚಕ್ರ ವಾಹನಗಳ ಕಳ್ಳತನ ಮಾಡುವುದನ್ನೆ ವೃತ್ತಿಯಾನ್ನಾಗಿಸಿಕೊಂಡಿದ್ದ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತನ ಬಂಧನದಿಂದ ಬೆಂಗಳೂರು ನಗರ ವಿದ್ಯಾರಣ್ಯಪುರದ 7, ರಾಮಮೂರ್ತಿನಗರ 1 ಹಾಗೂ ತುಮಕೂರು ಜಿಲ್ಲೆಯ ಜಯನಗರ, ತಿಲಕ್ ಪಾರ್ಕ್, ಮತ್ತು ತಿಲಕ್ ಪಾರ್ಕ್ ಎಕ್ಸ್‌ಟೆನ್ಸನ್ ಪೊಲೀಸ್ ಠಾಣೆಗಳ ತಲಾ ಒಂದು ಪ್ರಕರಣಗಳು ಸೇರಿದಂತೆ 11 ಪ್ರಕರಣಗಳು ಪತ್ತೆಯಾಗಿದ್ದು, ಸುಮಾರು 9 ಲಕ್ಷ ರೂ ಮೌಲ್ಯದ II ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ. ತನಿಖೆ ಮುಂದುವರೆದಿರುತ್ತದೆ.
ಬೆಂಗಳೂರು ನಗರ, ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀಪ್ರಸಾದ್
ಬಿ.ಎಂ, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಯಲಹಂಕ ಉಪ ವಿಭಾಗದ ಸಹಾಯಕ ಪೊಲೀಸ್
ಆಯುಕ್ತರಾದ ಶ್ರೀ ಮಂಜುನಾಥ್ ಆರ್ ರವರ ನೇತೃತ್ವದಲ್ಲಿ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯ
ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ಸುಂದರ, ಹಾಗೂ ಸಿಬ್ಬಂದಿಗಳು ಆರೋಪಿತನನ್ನು ಬಂಧಿಸಿ, ದ್ವಿಚಕ್ರ
ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಶಿಸಿರುತ್ತಾರೆ.