ರಾಮಮೂರ್ತಿನಗರ ಪೊಲೀಸ್ ಠಾಣೆಯ ಮೊಬೈಲ್ ಕಳುವು ಪ್ರಕರಣದಲ್ಲಿ ಓರ್ವ ವ್ಯಕ್ತಿಯನ್ನು ದಿನಾಂಕ:26/02/2024 ರಂದು ಬೆಳಗಿನ ಜಾವಾ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಿದಾಗ ಆತನು ಟಿನ್‌ಪ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ಮಹಿಳೆಯರನ್ನು ಗುರ್ತಿಸಿ ಅವರ ಹಿಂದಿನಿಂದ ಬಸ್ ಹತ್ತುವ ನೆಪದಲ್ಲಿ ಬ್ಯಾಗ್‌ನ ಜಿಪ್ ತೆಗೆದು ಮೊಬೈಲ್ ಫೋನ್‌ಗಳನ್ನು ಕಳುವು ಮಾಡುತ್ತಿದ್ದನು ಹಾಗೂ ಮೊಬೈಲ್ ಫೋನ್‌ನಲ್ಲಿ ಇರುತ್ತಿದ್ದ ಸಿಮ್ ಕಾರ್ಡ್‌ಗಳನ್ನು ಬೇರೊಂದು ಮೊಬೈಲ್ ಫೋನ್‌ಗೆ ಹಾಕಿ ಫೋನ್ ಪೇ. ಗೂಗಲ್ ಪೇಗಳ ಪಿನ್ ಕೋಡ್‌ಗಳನ್ನು ಬದಲಿಸಿ ಅವುಗಳ ಮೂಲಕ ಕಳುವು ಮಾಡಿದ್ದ ಮೊಬೈಲ್ ನಂಬರ್ ಲಿಂಕ್ ಹೊಂದಿದ ಬ್ಯಾಂಕ್‌ಗಳಲ್ಲಿರುವ ಹಣವನ್ನು ಬೇರೊಂದು ಪರಿಚಯಸ್ತನ ಅಕೌಂಟ್ ನಂಬರ್‌ಗೆ ವರ್ಗಾವಣೆ ಮಾಡಿ ನಂತರ ಪರಿಚಯಸ್ತನಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ. ಈ ರೀತಿ ಪಡೆದ ಹಣವನ್ನು ಅನ್‌ಲೈನ್‌ನಲ್ಲಿ ಇಸ್ಪೀಟ್ ಆಡಲು ಖರ್ಚು ಮಾಡುತ್ತಿದ್ದ. ಆತನ ವಶದಿಂದ ಒಟ್ಟು 38 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಮೌಲ್ಯ 18 ಲಕ್ಷ (ಎಂಟು ಲಕ್ಷ ರೂಪಾಯಿ) ಗಳಾಗಿರುತ್ತದೆ.
ಈ ಕಾರ್ಯಾಚರಣೆಯನ್ನು ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ.ಡಿ.ದೇವರಾಜ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಬಾಣಸವಾಡಿ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ.ಉಮಾಶಂಕರ್, ರವರ ನೇತೃತ್ವದಲ್ಲಿ, ರಾಮಮೂರ್ತಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.