7,00,000/- ಬೆಲೆ ಬಾಳುವ 20 ಮೊಬೈಲ್ ಫೋನ್‌ಗಳ ವಶ .
ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ದಿನಾಂಕ: 14.02.2024 ರಂದು ಪಿರಾದುದಾರರು ಬಸ್‌ನಲ್ಲಿ ಹೋಗುವಾಗ ಯಾರೋ ಮೊಬೈಲ್ ಫೋನ್‌ನನ್ನು ಕಳ್ಳತನ ಮಾಡಿರುವ ಬಗ್ಗೆ ನೀಡಿದ ದೂರಿನ ಮೇರೆಗೆ ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಕಳುವು ಪ್ರಕರಣವನ್ನು ದಾಖಲು ಮಾಡಿರುತ್ತಾರೆ.
ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಇಬ್ಬರು ವ್ಯಕ್ತಿಗಳನ್ನು ದಿನಾಂಕ: 14/03/2024 ರಂದು ವಶಕ್ಕೆ ಪಡೆದುಕೊಂಡಿರುತ್ತಾರೆ. ಅವರುಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಅವರಿಂದ ಈ 7,00,000/– ಬೆಲೆ ಬಾಳುವ ವಿವಿಧ ಕಂಪನಿಯ ಒಟ್ಟು 20 ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಇದರಲ್ಲಿ ಹೆಚ್.ಎ.ಎಲ್ ಪೊಠಾಣೆಗೆ ಸಂಬಂಧಪಟ್ಟ 03 ಪ್ರಕರಣಗಳು ಪತ್ತೆಯಾಗಿರುತ್ತದೆ.
ವಶಪಡಿಸಿಕೊಂಡ ವ್ಯಕ್ತಿಗಳನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ, ಬೆಂಗಳೂರು ನಗರದ ಜನನಿ ಬೀಡ ಬಸ್ ನಿಲ್ದಾಣಗಳಲ್ಲಿನ ಬಸ್‌ಗಳಲ್ಲಿ ಹತ್ತಿಕೊಂಡು ಬಸ್‌ನಲ್ಲಿ ನೂಕು ನೊಗ್ಗಲು ಉಂಟುಮಾಡಿ, ಸಾರ್ವಜನಿಕರ ಬ್ಯಾಗ್‌ನಲ್ಲಿರುವ & ಜೇಬಿನಲ್ಲಿರುವ ಮೊಬೈಲ್‌ಗಳನ್ನು ಕಳ್ಳತನ ಮಾಡಿ, ಮೊಬೈಲ್‌ಗಳ ಸಿಮ್ ಕಾರ್ಡ್‌ಗಳನ್ನು ತೆಗೆದು ಅವರ ಬಳಿಯಲ್ಲಿಯೇ ಇಟ್ಟುಕೊಂಡು, ನಂತರ ತಮಗೆ ಪರಿಚಯವಿರುವ ಇಬ್ಬರು ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದರು. ಇವರುಗಳು ಸಾಫ್ಟ್‌ವೇರ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕೃತ್ಯವ್ಯಸಗಿರುವ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಡಾ|| ಶಿವಕುಮಾರ್, ಐಪಿಎಸ್ ರವರ ಮಾರ್ಗದರ್ಶನದಲ್ಲಿ, ಶ್ರೀಮತಿ, ಪ್ರಯದರ್ಶಿನಿ ಈಶ್ವರ್ ಸಾಣೆಕೊಪ್ಪ, ಸಹಾಯಕ ಪೊಲೀಸ್ ಆಯುಕ್ತರು, ಮಾರತ್ ಹಳ್ಳಿ ಉಪ ವಿಭಾಗ ರವರ ನೇತೃತ್ವದಲ್ಲಿ, ಹೆಚ್.ಎ.ಎಲ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹಾಗೂ ಅಧಿಕಾರಿ/ಸಿಬ್ಬಂದಿಗಳು ಪ್ರಕರಣವನ್ನು ಬೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.