ದಾವಣಗೆರೆ: ದಿನಾಂಕ 02.07.2023 ರಂದು 02.30ಕ್ಕೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೆನಂದರೆ ನಾನು ಈ ದಿನ ದಿನಾಂಕ;-02.07.2023 ರಂದು ನಾನು 02 ನೇ ಮೇನ್ ಎಮ್ ಸಿಸಿ “ಬಿ” ಬ್ಲಾಕ್ ನಲ್ಲಿ ಮದ್ಯಾಹ್ನ 12.20 ರ ಸುಮಾರು ದಾವಣಗೆರೆ ನಗರದ 2 ನೇ ಮೇನ್ 4 ನೇ ಕ್ರಾಸ್ ಬಳಿ ಮೊಬೈಲ್ ನೋಡುತ್ತಾ ನಡೆದುಕೊಂಡು ಹೋಗುತ್ತಿರುವಾಗ ನನ್ನ ಹಿಂಭಾಗದಿಂದ ಯಾರೋ ಒಬ್ಬ ವ್ಯಕ್ತಿ ಸ್ಕೂಟರ್ ನಲ್ಲಿ ಬಂದು ನನ್ನ ಕೈಯಲ್ಲಿದ್ದ ಸ್ಯಾಮ್ ಸಾಂಗ್ ಮೊಬೈಲ್ ಎಮ್ 31 ಅಂದಾಜು ಮೌಲ್ಯ 10,000/- ರೂ ಮೊಬೈಲ್ ನ್ನು ಕಿತ್ತುಕೊಂಡು ವೇಗವಾಗಿ ಹೋದ ನಾನು ಕೂಗಿಕೊಂಡೆ ನಂತರ ಪೊಲೀಸ್ ಠಾಣೆಗೆ ಬಂದು ನನ್ನ ಮೊಬೈಲ್ ನ್ನು ಕಿತ್ತುಕೊಂಡು ಹೋದ ವ್ಯಕ್ತಿ ಮತ್ತು ಮೊಬೈಲ್ ಪೋನ್ ನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಿ ಅಂತಾ ನೀಡಿದ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆ ನಂ.165/2023 ಕಲಂ:-392 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಧನಂಜಯ್ ರವರು ತಮ್ಮ ಸಿಬ್ಬಂದಿಗಳ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ಮಾಡಿ ಸ್ಥಳದಲ್ಲಿ ಸಿಕ್ಕಾ ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಕೆಲವೇ ಗಂಟೆಗಳಲ್ಲಿ ಆರೋಪಿತ ನಿಂಗರಾಜ್ ಎ., 23 ವರ್ಷ ಅವರಗೆರೆ ವಾಸಿಯನ್ನು ದಸ್ತಗಿರಿ ಮಾಡಿ ಕಿತ್ತುಕೊಂಡು ಹೋಗಿದ್ದ ಮೊಬೈಲ್ ಅಂದಾಜು ಮೌಲ್ಯ 10,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅಂದಾಜು ಮೌಲ್ಯ 50,000/- ರೂ ಹಾಗೂ ಕೆಟೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮೊಬೈಲ್ (ಅಂದಾಜು ಮೌಲ್ಯ 20,000/- ರೂ) ನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನನ್ನು ಘನ ನ್ಯಾಯಲಯಕ್ಕೆ ಹಾಜರುಪಡಿಸಿರುತ್ತೆ.
ಈ ಕಾರ್ಯಾಚರಣೆಯನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ರಾಮಗೊಂಡ ಬಸರಗಿ, ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶನಲ್ಲಿ ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಧನಂಜಯ್ ರವರು ಸಿಬ್ಬಂದಿಗಳಾದ, ಸಿದ್ದೇಶ್ ಸೈಯದ್ ಅಲಿ, ಅರುಣ ಕುಮಾರ, ಹುನುಮಂತಪ್ಪ ಸಿ, ಸೋಮಪ್ಪ, ಗೀತಾ ಹೆಚ್. ಇವರುಗಳು ಕ್ಷಿಪ್ರ ಕಾರ್ಯಚರಣೆ ನಡೆಸಿ ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಪ್ರಕರಣದ ಆರೋಪಿತನನ್ನು ಹಾಗೂ ಕಿತ್ತುಕೊಂಡು ಹೋಗಿದ್ದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಿಸಿದ ಸ್ಕೂಟರ್ ಮತ್ತು ಕಳ್ಳತನವಾದ ಮೊಬೈಲ್ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಇವರುಗಳನ್ನು ಮಾನ್ಯ ಪೊಲೀಸ್ ಅಧೀಕ್ಷಕರವರಾದ ಡಾ.ಅರುಣ್ ಕೆ., ಐ.ಪಿ.ಎಸ್ ರವರು ಪ್ರಶಂಸನೆ ವ್ಯಕ್ತ ಪಡಿಸಿರುತ್ತಾರೆ.