ಮೈಸೂರಿನ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಐಪಿಎಸ್ ಅಧಿಕಾರಿ ಆರ್.ಚೇತನ್ ಗುರುವಾರ ಅಧಿಕಾರ ಸ್ವೀಕರಿಸಿದರು.
ಮೈಸೂರು ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ನಿರ್ಗಮಿತ ಜಿಲ್ಲಾ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಅವರಿಂದ ಅಧಿಕಾರ ಸ್ವೀಕಾರ ಮಾಡಿಕೊಂಡರು.

ನಂತರ ಮಾತನಾಡಿದ ಆರ್.ಚೇತನ್, \”\”ನಾನು ಕರ್ನಾಟಕದವನೇ ಆಗಿರುವುದರಿಂದ ನನಗೆ ಮೈಸೂರಿನ ಬಗ್ಗೆ ಗೊತ್ತಿದೆ. ಮೈಸೂರಿನ ಜನರು ಸೌಮ್ಯ ಸ್ವಭಾವದವರು. ಜನರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ತ್ವರಿತವಾಗಿ, ಸಾಂವಿಧಾನಿಕವಾಗಿ ಸ್ಪಂದಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ\’\’ ಎಂದು ತಿಳಿಸಿದರು.
ಜನರ ಅಹವಾಲುಗಳನ್ನ ಆಲಿಸಿ ಸಮಸ್ಯೆಗಳಿಗೆ ತ್ವರಿತವಾಗಿ ಸಂವಿಧಾನಿಕವಾಗಿ ಆಲಿಸಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಜನಸ್ನೇಹಿ ಪೊಲೀಸ್ ಹಾಗೂ ಸಮಸ್ಯೆಯನ್ನ ಮಾನವೀಯತೆ ದೃಷ್ಟಿಯಿಂದ ಸ್ಪಂದಿಸುವ ಪೊಲೀಸ್ ವ್ಯವಸ್ಥೆ ತರಲು ಇಚ್ಛೆ ಪಡುತ್ತೇನೆ. ಜಿಲ್ಲೆಯ ಮಹಿಳೆಯರು, ದುರ್ಬಲ ವರ್ಗದವರ ನೋವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತೇನೆ. ಈ ಮೂಲಕ ಜಿಲ್ಲೆಯ ಜನಪ್ರತಿನಿಧಿಗಳ, ಸಾರ್ವಜನಿಕರ ಸಹಕಾರ ಕೋರುತ್ತೇನೆ. ಇತಿಹಾಸದಿಂದ ಮೈಸೂರನ್ನ ನೋಡಿದರೆ ಇಲ್ಲಿ ಸೌಮ್ಯ ಸ್ವಭಾವದ ಜನರು ಇದ್ದಾರೆ. ಮೈಸೂರಿಗೆ ಸಾಕಷ್ಟು ಬಾರಿ ಭೇಟಿ ನೀಡಿದ್ದೇನೆ. ಜನರ ಅಪೇಕ್ಷೆಯಂತೆ ಕೆಲಸ ನಿರ್ವಹಿಸುತ್ತೇನೆ ಅಂತ ಆರ್.ಚೇತನ್ ಅವರು ಅಧಿಕಾರ ವಹಿಸಿಕೊಂಡ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್