ಮಾನ್ಯ ದಕ್ಷಿಣ ವಲಯ ಐಜಿಪಿರವರಾದ ಶ್ರೀ. ಪ್ರವೀಣ್ ಮಧುಕರ್ ಪವಾರ್ ಐಪಿಎಸ್ ರವರಿಂದು ಜಿಲ್ಲಾ ಸಿಇಎನ್ ( Cyber Economic And Narcotic Crime police station ) ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ , ಅಧಿಕಾರಿ ಸಿಬ್ಬಂದಿಗಳ ಕುಂದುಕೊರತೆ ಆಲಿಸಿದರು. ಇದೇ ವೇಳೆ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಜಾಸ್ತಿ ಉಂಟಾಗುತ್ತಿದ್ದು ಅಮಾಯಕರು ನಾನಾ ವಿಧದಲ್ಲಿ ವಂಚನೆಗೆ ಒಳಗಾಗುತ್ತಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅನಿವಾರ್ಯ ಎಂದು ಹೇಳಿದರು.
ಅಲ್ಲದೆ ಸೈಬರ್ ಅಪರಾಧಗಳಿಗೆ ಒಳಗಾಗುವವರು ಭಾವೋದ್ವೇಗಕ್ಕೆ ಒಳಗಾಗುವುದರಿಂದ ಠಾಣೆಗೆ ಬರುವ ಜನರೊಡನೆ ತಾಳ್ಮೆಯಿಂದ ವರ್ತಿಸಿ ಸಮಸ್ಯೆಗಳನ್ನು ಬಗೆಹರಿಸಲು ಸೂಚಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ.ಸೀಮಾ ಲಾಟ್ಕರ್ ಐಪಿಎಸ್ ರವರು, ಅಪರ ಪೊಲೀಸ್ ಅಧೀಕ್ಷಕರಾದ ಡಾ.ನಂದಿನಿ ಬಿ.ಎನ್ ರವರು, ಗ್ರಾಮಾಂತರ ಉಪವಿಭಾಗ ಡಿಎಸ್ಪಿ ಪೂರ್ಣಚಂದ್ರತೇಜಸ್ವಿ ರವರು & ಸೆನ್ ಪೊಲೀಸ್ ಠಾಣೆಯ ಪಿಐ ಪುರುಷೋತ್ತಮ್ ರವರು ಹಾಜರಿದ್ದರು