ಒರಿಸ್ಸಾ ರಾಜ್ಯದಿಂದ ಅಪರಿಚಿತ ಆಸಾಮಿಗಳು ಬೃಹತ್ ಪ್ರಮಾಣದಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಬೆಂಗಳೂರು ನಗರದಲ್ಲಿ ಮಾರಾಟ ಮಾಡಲು ಬರುತ್ತಿರುವುದಾಗಿ ದೊರೆತ ಖಚಿತ ಮಾಹಿತಿ ಮೇರೆಗೆ ದಿನಾಂಕ:03/09/2023 ರಂದು ಯಲಹಂಕ ಉಪನಗರ ಪೊಲೀಸ್ ಠಾಣೆಯ ಪೊಲೀಸರು ದಾಳಿ ಮಾಡಿ ಒರಿಸ್ಸಾ ರಾಜ್ಯದ 3 ಜನ ಆರೋಪಿತರನ್ನು ಬಂಧಿಸಿ ಆರೋಪಿತರ ವಶದಿಂದ ಸುಮಾರು 11 ಲಕ್ಷ ಮೌಲ್ಯದ 21.14 ಕೆಜಿ ಗಾಂಜಾ ವಶಪಡಿಸಿಕೊಂಡಿರುತ್ತಾರೆ.
ಈಶಾನ್ಯ ವಿಭಾಗದ ಮಾನ್ಯ ಉಪ ಪೊಲೀಸ್ ಆಯುಕ್ತರಾದ ಶ್ರೀ ಲಕ್ಷ್ಮೀ ಪ್ರಸಾದ್. ರವರ ಮಾರ್ಗದರ್ಶನದಲ್ಲಿ ಎ.ಸಿ.ಪಿ ಯಲಹಂಕ ಉಪವಿಭಾಗ ಶ್ರೀ ಆರ್. ಮಂಜುನಾಥ ರವರ ನೇತೃತ್ವದಲ್ಲಿ ಶ್ರೀ ಗೋವಿಂದರಾಜು, ಬಿ. ಪೊಲೀಸ್ ಇನ್ಸ್‌ಪೆಕ್ಟರ್ ಯಲಹಂಕ ಉಪನಗರ ಪೊಲೀಸ್ ಠಾಣೆ ಹಾಗು
ಸಿಬ್ಬಂಧಿಯವರುಗಳು ಆರೋಪಿತರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಉತ್ತಮ ಕಾರ್ಯವನ್ನು ಬೆಂಗಳೂರು ನಗರದ ಹಿರಿಯ ಅಧಿಕಾರಿಗಳು ಶ್ಲಾಘಿಸಿರುತ್ತಾರೆ.