ದಿನಾಂಕ: 27.06.2023 ರಂದು ಸಾಯಂಕಾಲ 06:00 ಗಂಟೆಗೆ ಫಿರಾದಿದಾರರಾದ ಶ್ರೀಮತಿ ಸುಜಾತ ಗಂಡ ಶಿವಾನಂದ ಬಿರಾದರ ವ: 29 ವರ್ಷ ಉಎಸ್.ಬಿ.ಆರ್ ಶಾಲೆಯಲ್ಲಿ ಆಯಾ ಕೆಲಸ ಸಾ:ಬೊಮ್ಮನಳ್ಳಿ ತಾ:ಆಳಂದ ಜಿ:ಕಲಬುರಗಿ ಹಾ.ವ:ಗುರುಬಸಪ್ಪ ಇವರ ಮನೆಯಲ್ಲಿ ಬಾಡಿಗೆ ಶಿವಾ ಅನುಭವ ಕಲ್ಯಾಣ ಮಂಟಪ ಹತ್ತಿರ ಶೇಕರೋಜಾ ಕಲಬುರಗಿರವರು ಪೊಲೀಸ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23.06.2023 ರಂದು ಸಾಯಂಕಾಲ 06:25 ಗಂಟೆಯಲ್ಲಿ ಶೇಕರೋಜಾ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ 03 ಜನರು ದ್ವಿ ಚಕ್ರ ವಾಹನದಲ್ಲಿ ಮೇಲೆ ಬಂದು ಕೊರಳಲ್ಲಿರುವ 10 ಗ್ರಾಂ ಬಂಗಾರದ ಗುಂಡುಗಳ ಕರಿಮಣಿ ಮಂಗಳ ಸೂತ್ರ ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಚೌಕ ಪೊಲೀಸ್ ಠಾಣೆ ಗುನ್ನೆ ನಂ.118/2023 ಕಲಂ.392 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್ (ಕಾ&ಸೂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ, ಮತ್ತು ಶ್ರೀ ಐ.ಎ.ಚಂದ್ರಪ್ಪ ಕೆ.ಎಸ್.ಪಿ.ಎಸ್ (ಅ&ಸಂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ ರವರ ಮಾರ್ಗದರ್ಶನದಲ್ಲಿ ಹಾಗೂ ಶ್ರೀ ದೀಪನ್ ಎಂ.ಎನ್ ಸಹಾಯಕ ಪೊಲೀಸ ಆಯುಕ್ತರು ಉತ್ತರ ಉಪ ವಿಭಾಗ ರವರ ನೇತೃತ್ವದಲ್ಲಿ ಚೌಕ ಪೊಲೀಸ ಠಾಣೆಯ ಪೊಲೀಸ ಇನ್ಸ್ ಪೆಕ್ಟರವರಾದ ಶ್ರೀ ರಾಜಶೇಖರ ಹಳಗೋದಿ ರವರ ನೇತೃತ್ವದಲ್ಲಿ ಶ್ರೀಮತಿ ಶಶಿಕಲಾ ಎಸ್. ನಿರ್ಮಲಕ ಪಿ.ಎಸ್.ಐ(ಅ) ಹಾಗೂ ಸಿಬ್ಬಂದಿಯವರಾದ ಸಂಜೀವಕುಮಾರ ಸಿ.ಹೆಚ್.ಸಿ-169, ಸುರೇಶ ಸಿ.ಪಿ.ಸಿ-130, ಅಶೋಕ ಸಿ.ಪಿ.ಸಿ-06, ರಾಜಕುಮಾರ ಸಿ.ಪಿ.ಸಿ-166, ಮಹ್ಮದ ತೌಸೀಫ್ ಹುಸೇನ ಸಿ.ಪಿ.ಸಿ-189, ಮೋಸಿನ್ ಸಿ.ಪಿ.ಸಿ-285, ಫಿರೋಜಖಾನ ಸಿ.ಪಿ.ಸಿ-313, ರವರುಗಳನ್ನು ಒಳಗೊಂಡ ತಂಡವು ದಿನಾಂಕ: 28-06-2023 ರಂದು ಬೆಳಿಗ್ಗೆ 06:00 ಗಂಟೆಗೆ ಸದರಿ ಪ್ರಕರಣದ ಆರೋಪಿತರನ್ನು ದಸ್ತಗಿರಿ ಮಾಡಿ ಕೂಲಂಕೂಷವಾಗಿ ವಿಚಾರಿಸಿದಾಗ ಆರೋಪಿಗಳು ತಮ್ಮ ಮೋಜಿನ ಜೀವನಕ್ಕಾಗಿ 01 ಸುಲಿಗೆ ಪ್ರಕರಣ ಮತ್ತು 04 ಮನೆ ಕಳ್ಳತನ ಪ್ರಕರಣ ಹೀಗೆ ಒಟ್ಟು 05 ಪ್ರಕರಣಗಳಲ್ಲಿ ಅಪರಾಧ ಮಾಡಿದ್ದು ತಪ್ಪೋಪ್ಪಿ ಕೊಂಡಿದ್ದು, ಸದರಿ ಆರೋಪಿತರಿಂದ ಸುಮಾರು 40 ಗ್ರಾಂ ಬಂಗಾರದ ಆಭರಣ ಮತ್ತು ನಗದು ಹಣ 25,000/-ರೂ ಹೀಗೆ ಒಟ್ಟು ಅ.ಕೆ 2,37,000/-ರೂ ನೇದ್ದವುಗಳನ್ನು ಹಾಗೂ ಆರೋಪಿಯು ಕೃತ್ಯಕ್ಕೆ ಉಪಯೋಗಿಸಿದ ಒಂದು ಸಿಲ್ವರ ಬಣ್ಣದ ಹಿರೋ ಸ್ಟೆಂಡರ ದ್ವಿ ಚಕ್ರ ವಾಹನ ಮತ್ತು 04 ಮೋಬೈಲ್‌ಗಳನ್ನು ಜಪ್ತಿ ಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ದಸ್ತಗಿರಿ ಕ್ರಮ ಕೈಗೊಂಡಿದ್ದು ಇರುತ್ತದೆ.
ಪ್ರಕರಣದ ಚಿತ್ತ ಇರ್ಯದಲ್ಲಿ ಯಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.