ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಅವರ ಮೊದಲ ಹುಟ್ಟುಹಬ್ಬ ಇಂದು ಮಾರ್ಚ್ 17 ಅವರ ಕುಟುಂಬಸ್ಥರು, ಅಭಿಮಾನಿಗಳಿಗೆ ನೋವಿನ ನಡುವೆ ಜೇಮ್ಸ್ ಚಿತ್ರ ಬಿಡುಗಡೆಯ ಭಾಗ್ಯ ನೋಡುವ ಪರಿಸ್ಥಿತಿ.
ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಲ್ಲೂ ಅಭಿಮಾನಿಗಳ ಕೂಗು, ಥಿಯೇಟರ್ ಗಳ ಮುಂದೆ ಜನಜಾತ್ರೆ, ಸಂಭ್ರಮ ಮುಗಿಲುಮುಟ್ಟಿದೆ. ತಮ್ಮ ನೆಚ್ಚಿನ ರಾಜರತ್ನನ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಹಲವು ರೀತಿಯ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದಾರೆ.
ವಿಶ್ವಾದ್ಯಂತ ಸೇರಿದಂತೆ ರಾಜ್ಯಾದ್ಯಂತ 4ಸಾವಿರ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರವು ಇಂದು ಬಿಡುಗಡೆ ಯಾಗಿತ್ತು ಹಾಗೂ ಇಂದು ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಸಾರ್ವಜನಿಕರು ಸಂಭ್ರಮಿಸಿದರು .
ಮಡಿವಾಳ ಮುಖಂಡರಾದ ಶ್ರೀ ಮಂಜುನಾಥ್ (ಮೂಸಿ )ಹಾಗೂ ಅವರ ಸ್ನೇಹಿತರೊಂದಿಗೆ ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿ ಪುನೀತ್ ರಾಜ್ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮುಖಾಂತರ ಜೇಮ್ಸ್ ಚಿತ್ರವು ಶತದಿನೋತ್ಸವ ಆಚರಿಸಲೆಂದು ಅಭಿಮಾನಿಗಳು ಶುಭ ಕೋರಿದರು .
ಇದೇ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಕೂಡ ಭಾಗವಹಿಸಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಪುಷ್ಪಾಚರಣೆ ಗೌರವ ಸಲ್ಲಿಸಿದರು .
ಅಕ್ಟೋಬರ್ 29ರಂದು ಇಡೀ ಕರುನಾಡಿಗೆ ಬರ ಸಿಡಿಲು ಬಡಿದಿತ್ತು. ಯಾರೂ ಊಹಿಸಿರದಂತ ಘಟನೆ ನಡೆದು ಹೋಗಿತ್ತು. ದೊಡ್ಮನೆಯ ಕೊನೆಯ ಕುಡಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಯಾರಿಗೂ ಹೇಳದೇ ಕೇಳದೇ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ಇಂದು ಅವರು ಇದ್ದಿದ್ದರೆ ಅದರ ಸಂಭ್ರಮವೇ ಬೇರೆ. ನಿನ್ನೆ ತಡರಾತ್ರಿಯಿಂದಲೇ ಅಪ್ಪು ಮನೆ ಮುಂದೆ ಜನಸಾಗರ ಸೇರುತ್ತಿತ್ತು. ಆದರೆ, ದೈವ ಇಚ್ಛೆಯೇ ಬೇರೆಯಾಗಿತ್ತು.
ಇಂದು ಅಪ್ಪು ನಮ್ಮ ಜೊತೆ ದೈಹಿಕವಾಗಿ ಇರದೇ ಹೋದರು, ನಮ್ಮ ಜೊತೆ ಇದ್ದೆ ಇರುತ್ತಾರೆ. ಇಂದು ಅಪ್ಪು ಇದ್ದಿದ್ದರೆ 47ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅಪ್ಪು ಇಲ್ಲದೇ ಮೊದಲ ಹುಟ್ಟುಹಬ್ಬವನ್ನು ಅಪ್ಪು ಇನ್ನೂ ಜೀವಂತವಾಗಿಯೇ ಇದ್ದಾರೆ ಎಂಬ ಭಾವನದೊಂದಿಗೆ ಸಂತೋಷವಾಗಿ ಅಭಿಮಾನಿಗಳು ಆಚರಿಸುತ್ತಿದ್ದಾರೆ .