ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಕಾಶ್ ಕೆ. ಬಿ ರವರು ಠಾಣೆಯಲ್ಲಿರುವಾಗ ಮಾಹಿತಿದಾರರಿಂದ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮಡಿವಾಳ ಸಂತೆ ಬೀದಿ ರಸ್ತೆಯಲ್ಲಿ ಇಬ್ಬರು ಆಸಾಮಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಅವರ ಹೆಗಲ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡ ಅವರುಗಳ ವರ್ಷದಲ್ಲಿ ಒಟ್ಟು 20 ಕೆ ಜಿ ತೂಕದ ಗಾಂಜಾ ತುಂಬಿರುವ ಪ್ಲಾಸ್ಟಿಕ್ ಚೀಲವನ್ನು ಅಮಾನತುಪಡಿಸಿ ಕೊಂಡಿರುತ್ತಾರೆ .ಈ ಗಾಂಜಾವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಐಟಿ ಬಿಟಿ ಕಂಪನಿಯ ಉದ್ಯೋಗಿಗಳಿಗೆ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿರುವುದಾಗಿ ತಿಳಿದು ಬಂದಿದ್ದು ,ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆಸಾಮಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ರುತ್ತಾರೆ .
ಈ ಪ್ರಕರಣದ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮೀಷನರ್ ಅವರ ಶ್ರೀಯುತ. ಶ್ರೀನಾಥ್ ಮಹಾದೇವ್ ಎಂ. ಜೋಷಿ ರವರ ನಿರ್ದೇಶನದಲ್ಲಿ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರಯುತ. ಸುಧೀರ್ ಎಂ. ಹೆಗ್ಡೆ ರವರುಗಳ ಮಾರ್ಗದರ್ಶನದಲ್ಲಿ ,ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ರವರ ನೇತೃತ್ವದಲ್ಲಿ ತಂಡ ಪಿ. ಎಸ್ .ಐ. ಶ್ರೀ .ಪ್ರಕಾಶ್ ಕೆ. ಬಿ., ಎ. ಎಸ್ .ಐ ಶ್ರೀ. ರೇವಣ್ಣ ಮತ್ತು ಸಿಬ್ಬಂದಿಯವರಾದ ಶ್ರೀ. ವೆಂಕಟೇಶ, ಶ್ರೀ. ನಾರಾಯಣಪ್ಪ ,ಶ್ರೀ. ಹರಿನಾಥ್ ರವರುಗಳು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿ ಆಗಿರುತ್ತಾರೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,