ಬೆಂಗಳೂರು : ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಉದ್ದೇಶದಿಂದ ಬೆಂಗಳೂರು ನಗರ ಠಾಣೆಗಳಲ್ಲಿ ಮಾಸಿಕ ಸಂಪರ್ಕ ಸಭೆ ನಡೆಸುತ್ತಿದ್ದಾರೆ .ಪ್ರತಿ ತಿಂಗಳ ನಾಲ್ಕನೇ ಶನಿವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 1ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯುತ್ತದೆ .ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ವ್ಯಾಪ್ತಿಯ ಠಾಣೆ ಇನ್ಸ್ ಪೆಕ್ಟರ್ ಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಯಾವುದೇ ಸಮಸ್ಯೆ ಹೇಳಿಕೊಳ್ಳಬಹುದು .
ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಇಂದು ಮಾಸಿಕ ಜನಸಂಪರ್ಕ ದಿನವನ್ನು ಆಚರಿಸಲಾಗಿತ್ತು ಮಡಿವಾಳ ಪೊಲೀಸ್ ಠಾಣಾಧಿಕಾರಿ ಶ್ರೀ. ಪೌಲ್ ಪ್ರಿಯಾ ಕುಮಾರ್ ರವರು ,ಸಬ್ ಇನ್ಸ್ ಪೆಕ್ಟರ್ ಶ್ರೀ .ಕಿಶೋರ್ ರವರು ಹಾಗೂ ಸಿಬ್ಬಂದಿಗಳುಹಾಜರಿದ್ದರು . ಜನಸಂಪರ್ಕ ಸಭೆಯಲ್ಲಿ ಪಾಲ್ಗೊಂಡ ಸಾರ್ವಜನಿಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಕೆಲವು ದೂರುಗಳು ತಕ್ಷಣವೇ ಪರಿಶೀಲಿಸಲಾಯಿತು.ಅಲ್ಲಲ್ಲಿ ಹುಡುಗರು ಗಾಂಜಾ ಸೇವಿಸುತ್ತಿದ್ದಾರೆ ,ಸಿದ್ಧಾರ್ಥ ಕಾಲೊನಿಯಲ್ಲಿ ರೌಡಿಸಂ ಜಾಸ್ತಿಯಾಗಿದೆ ಹಾಗೂ ಭಾನುವಾರದಲ್ಲಿ ಮಡಿವಾಳ ಮೇಯ್ನ್ ರೋಡಿನಲ್ಲಿ ಟ್ರಾವೆಲ್ಸ್ ವಾಹನಗಳು ಪಾರ್ಕ್ ಮಾಡಿ ಟ್ರಾಫಿಕ್ ಸಮಸ್ಯೆ ಉಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಠಾಣಾಧಿಕಾರಿಗೆ ತಿಳಿಸಿದರು .ದೂರುಗಳನ್ನು ಸ್ವೀಕರಿಸಿದ ಸಿಬ್ಬಂದಿಗಳು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್