ಮಂಡ್ಯ ಉಪ ವಿಭಾಗ ಪೊಲೀಸ್‌ರ ಕಾರ್ಯಾಚರಣೆಯಲ್ಲಿ ಒಟ್ಟು 6 ಜನ ಆರೋಪಿಗಳ ಬಂಧನ, ಆರೋಪಿಗಳಿಂದ ಮಂಡ್ಯ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ 15 ಲಕ್ಷ ಮೌಲ್ಯದ 26 ಮೋಟಾರ್ ಸೈಕಲ್‌ಗಳು ಹಾಗೂ ಶಿವಳ್ಳಿ ಠಾಣಾ ಮೊ.ಸಂ 07/2015 ಕಲಂ 380 ಐಪಿ.ಸಿ ಪ್ರಕರಣದಲ್ಲಿ ಕಳ್ಳತನವಾಗಿದ್ದ 2 ಲಕ್ಷ ಮೌಲ್ಯದ 42 ಗ್ರಾಂ ಚಿನ್ನಾಭರಣ ಮತ್ತು ಮಂಡ್ಯ ಪೂರ್ವ ಪೊಲೀಸ್ ಮೊ.ಸಂ 121/2021 ಕಲಂ 381 ಐ.ಪಿ.ಸಿ ಪ್ರಕರಣದಲ್ಲಿ ನಕ್ಷತ್ರ ಕಲೆಕ್ಷನ್ ಬಟ್ಟೆ ಅಂಗಡಿಯಲ್ಲಿ ಕಳ್ಳತನವಾಗಿದ್ದ 90 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿರುತ್ತಾರೆ. ಮೇಲ್ಕಂಡ ಪ್ರಕರಣಗಳನ್ನು ಪತ್ತೆ ಮಾಡಲು ಶ್ರಮಿಸಿದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತನಿಖಾ ತಂಡವನ್ನು ಅಭಿನಂದಿಸಿರುತ್ತಾರೆ.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
