ಮಂಗಳೂರು ನಗರ ಪೊಲೀಸ್ ಅಧಿಕಾರಿ, ನಾಗರಿಕ ಕೇಂದ್ರಿತ ಉಪಕ್ರಮದ ಅಡಿಯಲ್ಲಿ, ಮಂಗಳೂರು ನಗರದಲ್ಲಿ ಕ್ಯೂಆರ್ ಕೋಡ್ ಆಧಾರಿತ ಪ್ರತಿಕ್ರಿಯೆ ಕಾರ್ಯವಿಧಾನದ ಪ್ರಾರಂಭ ಮತ್ತು ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಡಿಜಿ ಮತ್ತು ಐಜಿಪಿ ಶ್ರೀ ಪ್ರವೀಣ್ ಸೂದ್ ಅವರು ಮಾಡಿದರು. ಇದು ನಾಗರಿಕರಿಂದ ಮೊದಲ ಕೈ ಪ್ರತಿಕ್ರಿಯೆಯನ್ನು ಪಡೆಯಲು ನಮಗೆ ಅನುವು ಮಾಡಿಕೊಡುತ್ತದೆ. ಎಲ್ಲರೂ ಇದನ್ನು ಬಳಸಿಕೊಳ್ಳಬೇಕಾಗಿ ವಿನಂತಿ ಮತ್ತು ನಿಮ್ಮ ಅಮೂಲ್ಯವಾದ ಪ್ರತಿಕ್ರಿಯೆಯನ್ನು ನಮಗೆ ಒದಗಿಸಿ ಎಂದು ಕೇಳಿಕೊಂಡರು. ಈ ಸಮಯದಲ್ಲಿ ಮಂಗಳೂರು ಸಿಟಿ ಕಮಿಷನರ್ ಮಾತನಾಡಿ ಪೊಲೀಸ್ ಸದಾ ಜನರ ರಕ್ಷಣೆಗೆ ನಿಲ್ಲುತ್ತೆ ಇನ್ನು ಹೆಚ್ಚಾಗಿ ನಾವು ಸೇವೆ ಮಾಡಲು ಈ ಪ್ರಕ್ರಿಯೆ ನೇರವಾಗುತ್ತೆ ಎಂದು ತಿಳಿಸಿದರು.
