ಬೆಂಗಳೂರು ನಗರ :ದಿನಾಂಕ : 14-01-2022 ರಂದು ಸಂಜೆ 5:40 ಗಂಟೆಯಿಂದ 6:00 ಗಂಟೆಯ ನಡುವೆ ಮಡಿವಾಳ ಪೊಲೀಸ್ ಠಾಣೆ ಸರಹದ್ದಿನ ಎಸ್ .ಬಿ .ಐ. ಬ್ಯಾಂಕಿನ ಅಧಿಕಾರಿ ಮತ್ತು ಸಿಬ್ಬಂದಿ ರವರು ಕೆಲಸ ಮುಗಿಸಿ ಮನೆಗೆ ಹೊರಡುವ ಸಮಯದಲ್ಲಿ ಸುಮಾರು 30 ರಿಂದ 35 ವರ್ಷ ವಯಸ್ಸಿನ ಆಸಾಮಿಯೊಬ್ಬನ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಬಂದು, ಬ್ಯಾಂಕಿನ ಮುಖ್ಯ ದ್ವಾರದ ಬಾಗಿಲು ಹಾಕುತ್ತಿದ್ದ ಸಿಬ್ಬಂದಿಯವರ ಕತ್ತಿನ ಬಳಿ ಚಾಕು ಬ್ಯಾಂಕಿನ ಬಾಗಿಲು ತೆರೆದು ಬ್ಯಾಂಕಿನಲ್ಲಿರುವ ಹಣವನ್ನು ತುಂಬಿ ಕೊಡುವಂತೆ ಕೇಳಿದಾಗ ,ಬ್ಯಾಂಕ್ ಸಿಬ್ಬಂದಿ ಅವರು ಭಯದಿಂದ ಬಾಗಿಲ ಕೀಯನ್ನು ತೆರೆದು ಸ್ಟ್ರಾಂಗ್ ರೂಮ್ ಕಡೆಗೆ ಕರೆದುಕೊಂಡು ಹೋಗಿ ,ಲಾಕರ್ ನ್ನು ಓಪನ್ ಮಾಡಿಸಿ ಅದರಲ್ಲಿದ್ದ 3,76,960/-ರೂ ನಗದು ಮತ್ತು 1ಕೆ ಜಿ 805 ಗ್ರಾಂ ತೂಕದ (16 ಪ್ಯಾಕೆಟ್) ಚಿನ್ನದ ಒಡವೆಗಳನ್ನು ತೆಗೆದುಕೊಂಡು ಪರಾರಿಯಾಗಿರುತಾನೆಂದು ನೀಡಿರುವ ದೂರಿನ ಮೇರೆಗೆ ಮಡಿವಾಳ ಪೊಲೀಸ್ ಠಾಣೆ ಪ್ರಕರಣಗಳನ್ನು ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿರುತ್ತದೆ .
ಈ ದೂರನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣವೇ ಕಾರ್ಯಕ್ಕೆ ವಿವಿಧ ತಂಡವನ್ನು ರಚಿಸಿ ಮಾಹಿತಿ ಸಂಗ್ರಹಿಸಿ ದಿನಾಂಕ : 18-01-2022 ರಂದು ಸಂಜೆ 4:30 ಗಂಟೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ಆರೋಪಿತನಿಂದ .
1 ಕೆಜಿ 805 ಗ್ರಾಂ ಚಿನ್ನದ ಒಡವೆಗಳು
ರೂ .6,50,000/ ನಗದು
ಕಾಲೇಜ್ ಬ್ಯಾಗ್
1ಆಂಡ್ರಾಯ್ಡ್ ಮೊಬೈಲ್ ಫೋನ್
1ಚಾಕು
ಸದರಿ ಆರೋಪಿಯಿಂದ ಒಟ್ಟು 85,38,320/-ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣ ವಶಪಡಿಸಿಕೊಂಡಿರುತ್ತದೆ .
ಬಂಧಿತ ಆರೋಪಿ ಇಂಜಿನಿಯರ್ ಪದವಿ ಪಡೆದುಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದ್ರೆ ಬೇಗ ಹೆಚ್ಚು ಹಣ ಗಳಿಸುವ ಆಸೆಯಿಂದ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದನು. ವಿವಿಧ ಮೊಬೈಲ್ ಆಪ್ ಗಳಲ್ಲಿಯೂ ಸಾಲ ಪಡೆದುಕೊಂಡಿದ್ದನು. ಸಾಲ ನೀಡಿದವರ ಕಿರುಕುಳ ಹೆಚ್ಚಾದ ಹಿನ್ನೆಲೆ ಬ್ಯಾಂಕ್ ದರೋಡೆ ಮಾಡಲು ಹೊಂಚು ಹಾಕಿದ್ದನು.ಗೂಗಲ್ ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಒಬ್ಬನೇ ಬ್ಯಾಂಕ್ ರಾಬರಿ ಮಾಡುವುದನ್ನ ಸರ್ಚ್ ಮಾಡಿದ್ದನು. ಇಡೀ ಬೆಂಗಳೂರು ಸೆಕ್ಯೂರಿಟಿ ಇಲ್ಲದ ಬ್ಯಾಂಕ್ ಗಳನ್ನ ಸರ್ಚ್ ಮಾಡಿದ್ದನು. ಬಳಿಕ ಬಿಟಿಎಂ ಲೇಔಟ್ ನಲ್ಲಿ ಸೆಕ್ಯೂರಿಟಿ ಇಲ್ಲದ್ದನ್ನ ಗಮನಿಸಿ ಮೂರು ದಿನ ಹೊಂಚು ಹಾಕಿದ್ದನು.
ಈ ಕಾರ್ಯಾಚರಣೆಯನ್ನು ಶ್ರೀ . ಶ್ರೀನಾಥ್ ಎಂ ಜೋಷಿ ಐ.ಪಿ.ಎಸ್ . ಡಿಸಿಪಿ ಆಗ್ನೇಯ ವಿಭಾಗ ,ಮಾರ್ಗದರ್ಶನದಲ್ಲಿ .ಶ್ರೀ ಎಂ ಎನ್ ಕರಿಬಸವನಗೌಡ ಎಸಿಪಿ ಮೈಕೋ ಲೇಔಟ್ ಉಪವಿಭಾಗ ನೇತೃತ್ವದಲ್ಲಿ ಹಾಗೂ ಶ್ರೀ ಸುಧೀರ್ ಎಂ ಹೆಗ್ಡೆ ಎಸಿಪಿ ಮಡಿವಾಳ ಉಪವಿಭಾಗದ ನೇತತ್ವದಲ್ಲಿ.ಅಧಿಕಾರಿಗಳಾದ ಶ್ರೀ ಪಾಲ್ ಪ್ರಿಯಕುಮಾರ್ ಠಾಣಾಧಿಕಾರಿ ಮಡಿವಾಳ ಠಾಣೆ ,ಶ್ರೀ ರವಿ ಕೆ ಬಿ ಠಾಣಾಧಿಕಾರಿ ಕೋರಮಂಗಲ ಠಾಣಾ ,ಶ್ರೀ ನಟರಾಜು ಠಾಣಾಧಿಕಾರಿ ಎಸ್ ಜಿ ಪಾಳ್ಯ ಪೊಲೀಸ್ ಠಾಣಾ ,ಶ್ರೀ ಪ್ರವೀಣ್ ಸಬ್ ಇನ್ ಸ್ಪೆಕ್ಟರ್ ತಿಲಕ್ ನಗರ ಪೊಲೀಸ್ ಠಾಣಾ ,ಶ್ರೀ ನಾಗರಾಜು ಎಸ್ ಶೆಟ್ಟರ್ ಸಬ್ಇನ್ಸ್ಪೆಕ್ಟರ್ ಮಡಿವಾಳ ಠಾಣಾ ,ಶ್ರೀ ಬಾಬು ಸಬ್ ಇನ್ಸ್ ಪೆಕ್ಟರ್ ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣಾ ಮತ್ತು ಮಡಿವಾಳ, ಎಸ್ ಜಿ ಪಾಳ್ಯ ,ಕೋರಮಂಗಲ ,ಆಡುಗೋಡಿ ,ಎಚ್ಎಸ್ಆರ್ ಲೇಔಟ್, ತಿಲಕ್ ನಗರ ಪೊಲೀಸ್, ಠಾಣೆ ಅಪರಾಧ ವಿಭಾಗದ ಸಿಬ್ಬಂದಿಗಳು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ .
ಈ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಮತ್ತು ಅಪರ ಪೊಲೀಸ್ ಆಯುಕ್ತರು ಪೂರ್ವ ರವರುಗಳು ಪ್ರಶಂಸಿಸಿರುತ್ತಾರೆ
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್