ಮಾಸಿಕ ಜನಸಂಪರ್ಕ ದಿನದ ಅಂಗವಾಗಿ ಮೇ28 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ
ಸಾರ್ವಜನಿಕರು ಸಮಸ್ಯೆ,ಸಲಹೆಗಳನ್ನು ಚರ್ಚೆ ಮಾಡಲು ಸಾರ್ವಜನಿಕರು ಮೈಕೋ ಲೇಔಟ್ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದರು .ಎಲ್ಲ ಪೊಲೀಸ್ ಠಾಣೆಗಳಲ್ಲಿ ಜನಸಂಪರ್ಕ ಸಭೆ ನಡೆಸಲಾಯಿತು .
ಬೆಂಗಳೂರಿನ ಮೈಕೋ ಲೇಔಟ್ ಠಾಣೆ ವತಿಯಿಂದ ಶನಿವಾರ ಜನಸಂಪರ್ಕ ಸಭೆಯನ್ನು ಪೋಲಿಸ್ ಠಾಣೆಯಲ್ಲಿ ನಡೆಸಲಾಯಿತು.
ಬಿ. ಟಿ. ಎಂ. ಲೇಔಟ್ ಸಾರ್ವಜನಿಕರು ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರುಗಳನ್ನು ಡಿ.ಸಿ.ಪಿ ಯವರಿಗೆ ದಾಖಲಿಸಿದರು ,ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಬಗ್ಗೆ ದೂರುಗಳನ್ನು ಸಾರ್ವಜನಿಕರು ದಾಖಲಿಸಿದರು.
ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಸಭೆಯಾಗಿದೆ.ಪ್ರತಿ ಠಾಣೆಯಲ್ಲಿ ಮಾಸಿಕ ಜನಸಂಪರ್ಕ ಸಭೆ ನಡೆಸಲು ನಗರ ಪೊಲೀಸ್ ಆಯುಕ್ತರು ತೀರ್ಮಾನಿಸಿದ್ದಾರೆ.ಈ ಸಭೆಯಲ್ಲಿ ಠಾಣಾ ಇನ್ಸ್ ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಹೇಳಿಕೊಳ್ಳಬಹುದು.
ಈ ಸಭೆಯನ್ನು ಶ್ರೀ . ಶ್ರೀನಾಥ್ ಎಂ ಜೋಷಿ ಐ.ಪಿ.ಎಸ್ . ಡಿಸಿಪಿ ಆಗ್ನೇಯ ವಿಭಾಗ ,ಮಾರ್ಗದರ್ಶನದಲ್ಲಿ,ಶ್ರೀ. ಮೈಕೊ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ ನೇತತ್ವದಲ್ಲಿ ಹಾಗೂ ಠಾಣಾಧಿಕಾರಿಯಾದ ಶ್ರೀ. ಆರ್ ಎಸ್ ಚೌದರಿ ಅವರ ಮಾಸಿಕ ಜನಸಂಪರ್ಕ ಸಭೆ ಆಯೋಜಿಸಿದರು ,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಸಮಸ್ಯೆಗಳು ಹೇಳಿ ಕೊಂಡು ಮತ್ತು ಸಲಹೆಗಳನ್ನು ಠಾಣಾಧಿಕಾರಿಗೆ ತಿಳಿಸಿದರು .ಕೆಲವು ಸಮಸ್ಯೆಗಳು ಸ್ಥಳದಲ್ಲೇ ಪರಿಹರಿಸಲಾಯಿತು .
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್