ಆರೋಪಿಗಳಿಂದ ಒಟ್ಟು 10,41,670/- ಲಕ್ಷ ಬೆಲೆಬಾಳುವ 1ಕಾರು 1ದ್ವಿಚಕ್ರ ವಾಹನ ಬೆಟ್ಟಿಂಗ್ಗೆ ಉಪಯೋಗಿಸುತ್ತಿದ್ದ 3ಮೊಬೈಲ್ ಫೋನ್ ಗಳು ಹಾಗೂ ನಗದು ಹಣ ವಶ.
ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್ ವೈ ನಾಯಕ್ ರವರ ತಂಡ ರಾತ್ರಿ ಸಮಯದಲ್ಲಿ ಠಾಣಾ ಸರಹದ್ದಿನಲ್ಲಿ ಗಸ್ತಿನಲ್ಲಿರುವಾಗ ಮಡಿವಾಳ ಠಾಣಾ ವ್ಯಾಪ್ತಿಯ ಹೊಸೂರು ಮುಖ್ಯರಸ್ತೆಯಲ್ಲಿರುವ ಲಾಡ್ಜ್ ವೊಂದರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ರಾಜಸ್ತಾನ್ ರಾಯಲ್ಸ್ ತಂಡಗಳ ಗೆಲುವು ಮತ್ತು ಸೋಲಿನ ಬಗ್ಗೆ ಆನ್ ಲೈನ್ ನಲ್ಲಿ ಹಣವನ್ನು ಪಣವಾಗಿ ಕಟ್ಟಿಕೊಂಡು ಕ್ರಿಕೆಟ್ ಆನ್ ಲೈನ್ ಬೆಟ್ಟಿಂಗ್ ಆಡುತ್ತಿದ್ದಾರೆಂದು ಖಚಿತ ಮಾಹಿತಿ ಮೇರೆಗೆ ಮೇಲೆ ದಾಳಿ ಮಾಡಿ 3ಜನ ಆರೋಪಿಗಳ ವಶಕ್ಕೆ ಪಡೆದು ಆರೋಪಿಗಳ ವಶದಿಂದ ಒಟ್ಟು 10,41,670/-ಲಕ್ಷ ಬೆಲೆ ಬಾಳುವ
1.Hyundai i 20 car
2.KTM Duke Motorbike
3.Different Models 3 Android Mobile Phones
4.Betting amount of Rs.59,670/-
ವಶಪಡಿಸಿಕೊಂಡಿರುತ್ತಾರೆ .
ಕರ್ನಾಟಕ ಸರ್ಕಾರದ ಪೊಲೀಸ್ ಕಾಯಿದೆ -1963 ತಿದ್ದುಪಡಿ ಆದೇಶದ ಅಧಿನಿಯಮ -2021 ದಿನಾಂಕ :05-10-2021 ರ ಆದೇಶದಂತೆ ಇದೇ ಮೊದಲ ಬಾರಿಗೆ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .
ಈ ಪ್ರಕರಣ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಆಗ್ನೇಯ ವಿಭಾಗದ ಉಪ ಪೊಲೀಸ್ ಕಮಿಷನರ್ ರವರಾದ ಶ್ರೀಯುತ .ಶ್ರೀನಾಥ್ ಮಹದೇವ್ .ಎಂ. ಜೋಷಿ ರವರ ನಿರ್ದೇಶನದಲ್ಲಿ ,ಮಡಿವಾಳ ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಕಮೀಷನರ್ ಶ್ರಯುತ. ಸುಧೀರ್ .ಎಂ. ಹೆಗ್ಡೆ ರವರುಗಳ ಮಾರ್ಗದರ್ಶನದಲ್ಲಿ ,ಮಡಿವಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ .ಸುನೀಲ್ ವೈ ನಾಯಕ್ ರವರ ನೇತೃತ್ವದಲ್ಲಿ ತಂಡ ಪಿ .ಎಸ್. ಐ . ಶ್ರೀ.ಪ್ರಕಾಶ್ ಕೆ .ಬಿ, ಎ.ಎಸ್. ಐ. ರವರುಗಳಾದ ಶ್ರೀ .ರೇವಣ್ಣ ,ಶ್ರೀ ಶಂಕರ್ ಮತ್ತು ಸಿಬ್ಬಂದಿಯವರಾದ ಶ್ರೀ ಚಂದನ್ ಎಸ್ ,ಶ್ರೀಗುರು ಜಂಪಲಗಿ , ಶ್ರೀ .ಮಂಜು ಯು .ಎಂ .ಶ್ರೀ.ಪ್ರಕಾಶ್ .ಶ್ರೀ .ಪ್ರವೀಣ್ ಕಾಮನೂರು .ಶ್ರೀ .ಕಿರಣ್ ಕುಮಾರ್ .ಶ್ರೀ .ಲಿಂಗರಾಜ್ ರವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,