ದಿನಾಂಕ ೨೮/೦೯/೨೦೨೩ ರಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ, ಹಲಸೂರು ಗೇಟ್ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ನೃಪತುಂಗ ರಸ್ತೆಯ ವೈ.ಎಂ.ಸಿ.ಎ ಮೈದಾನದಕ್ಕೆ ಮದ್ಯಾಹ್ನ ೦೩-೦೦ ರಿಂದ ರಾತ್ರಿ ೦೯-೦೦ ಗಂಟೆಯವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಿವಿಧ ಸ್ಥಳಗಳಿಂದ ಆಗಮಿಸುವುದರಿಂದ ವಾಹನ ಸವಾರರು / ಚಾಲಕರುಗಳು ಈ ಕೆಳಕಂಡ ರಸ್ತೆಗಳನ್ನುಬಳಸದೇ ಬದಲೀ ಮಾರ್ಗದಲ್ಲಿ ಸಂಚರಿಸಲು ಕೋರಿದೆ.
ಸಂಚಾರ ದಟ್ಟಣೆಯಾಗುವ ರಸ್ತೆ ಬದಲಿ ಮಾರ್ಗ
ನೃಪತುಂಗ ರಸ್ತೆ ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನ ಸವಾರರು ಕೆ.ಆರ್ ಸರ್ಕಲ್ ಬಳಿ
ಎಡ ತಿರುವು ಪಡೆದು ಡಾ|| ಅಂಬೇಡ್ಕರ್ ರಸ್ತೆಯಲ್ಲಿ ಸಾಗಿ ಬಾಳೇಕುಂದ್ರಿ ಸರ್ಕಲ್ ಕ್ವೀನ್ಸ್
ರಸ್ತೆ ಮೂಲಕ ಮುಂದಕ್ಕೆ ತೆರಳುವುದು.
ಡಾ||ಬಿ.ಆರ್. ಅಂಬೇಡ್ಕರ್ ರಸ್ತೆ ಬಾಳೇಕುಂದ್ರಿ ಸರ್ಕಲ್‌ನಿಂದ ಸಿಟಿ ಮಾರ್ಕೆಟ್ ಕಡೆಗೆ ಸಂಚರಿಸುವ ಸವಾರರು ಕ್ವೀನ್ಸ್ ರಸ್ತೆ ಸಿದ್ದಲಿಂಗಯ್ಯ ಸರ್ಕಲ್ ಮೂಲಕ ಸಂಚರಿಸುವುದು.
ನಾಯಡನಹಳ್ಳಿ ಜಂಕ್ಷನ್ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ನಾಯಂಡನಹಳ್ಳಿ ಜಂಕ್ಷನ್ ನಲ್ಲಿ ಎಡ ತಿರುವು ಪಡೆದು ನಾಗರಬಾವಿ ರಿಂಗ್ ರಸ್ತೆ ಮೂಲಕ ಸಂಚರಿಸಬಹುದಾಗಿದೆ ಹಾಗೂ
ಚಂದ್ರಲೇಔಟ್ ವಿಜಯನಗರ ಮುಖೇನ ಸಂಚರಿಸಬಹುದಾಗಿರುತ್ತದೆ.
ಕಿಕೋ ಜಂಕ್ಷನ್ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ಕಿಂಕೋ ಜಂಕ್ಷನ್‌ನಲ್ಲಿ ಎಡತಿರುವು
ಪಡೆದು ವಿಜಯನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ
ಬಾಪೂಜಿ ನಗರ ಮೈಸೂರು ರಸ್ತೆಯಲ್ಲಿ ಸಂಚಾರ ದಟ್ಟಣೆ ಹೆಚ್ಚಾದಲ್ಲಿ ವಿಜಯನಗರದ ಕಡೆಯಿಂದ ಬರುವ
ವಾಹನಗಳು ಮೈಸೂರು ಕಡೆಗೆ ಚಲಿಸಲು ಚಂದ್ರಲೇಔಟ್‌ನಿದ ಬಲ ತಿರುವು ಪಡೆದು ನಾಗರಬಾವಿ ಸರ್ಕಲ್ ಹಾಗೂ ರಿಂಗ್ ರಸ್ತೆ ಮುಖಾಂತರ ಕೆಂಗೇರಿ ಉಪ ನಗರ ಮಾರ್ಗವಾಗಿ ಸಂಚರಿಸಬಹುದಾಗಿರುತ್ತದೆ.
ಮಾರ್ಕೆಟ್ ಸರ್ಕಲ್ ಟೌನ್ ಹಾಲ್ ಕಡೆಗೆ ಸಂಚಾರ ದಟ್ಟಣೆ ಉಂಟಾದಲ್ಲಿ ಬಸಪ್ಪ ಸರ್ಕಲ್ ಕಡೆಗೆ ಬಲತಿರುವು
ನೀಡಿ ಅಥವಾ ಅವಿನ್ಯೂ ರಸ್ತೆ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗುವುದು.
ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈದ್-ಎ-ಮಿಲಾದ್ ಹಬ್ಬದ ಪ್ರಯುಕ್ತ ಶಿವಾಜಿನಗರ ಕಂಬಲ್ ಘೋಷ್ ದರ್ಗಾಕ್ಕೆ ಮೆರವಣಿಗೆ ಇರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಬೆಳಗ್ಗೆ ೧೦-೦೦ ಗಂಟೆಯಿದ ರಾತ್ರಿ ೧೦:೦೦ ಗಂಟೆವರೆಗೆ ಈ ಕೆಳಕಂಡತೆ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ.
ಸಂಚಾರವನ್ನು ನಿರ್ಬಂಧಿಸಿರುವ ರಸ್ತೆಗಳು:
ನಾಗವಾರ ಜಂಕ್ಷನ್‌ನಿದ ಪಾಟರಿ ಸರ್ಕಲ್ ರಸ್ತೆಯವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ನೇತಾಜಿ ಜಂಕ್ಷನ್‌ನಿದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ಲಾಜರ್ ರಸ್ತೆ ಮತ್ತು ಎಂ.ಎ.ರಸ್ತೆ ಜಂಕ್ಷನ್‌ನಿದ ಹೆನ್ಸ್ ಜಂಕ್ಷನ್‌ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ಹೆಚ್.ಎಂ.ರಸ್ತೆಯಲ್ಲಿ ಕೆ.ಇ.ಬಿ. ಜಂಕ್ಷನ್‌ನಿದ ಹಾಲ್ ರಸ್ತೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ನಿರ್ಬಧಿಸಿದ ಸಂಚಾರಕ್ಕೆ ಪರ್ಯಾಯ ಮಾರ್ಗಗಳು:
೧. ಥಣಿಸಂದ್ರ ಕಡೆಯಿಂದ ಶಿವಾಜಿನಗರ ಕಡೆಗೆ ಬರುವ ವಾಹನಗಳು ನಾಗವಾರ ಜಂಕ್ಷನ್‌ನಿದ -ಎಡತಿರುವು – ಹೆಣ್ಣೂರು ಜಂಕ್ಷನ್ – ಬಲತಿರುವು – ಸಿದ್ದಪ್ಪ ರೆಡ್ಡಿ ಜಂಕ್ಷನ್ – ಅಯೋಧ್ಯ ಜಂಕ್ಷನ್-ಲಿಗರಾಜಪುರ ಫ್ಲಓವರ್ ಮೂಲಕ ರಾಬರ್ಟ್ಸನ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು – ಹೇನ್ಸ್ ರಸ್ತೆ ಮೂಲಕ ಶಿವಾಜಿನಗರ ತಲುಪುವುದು.
೨. ಶಿವಾಜಿನಗರದ ಕಡೆಯಿಂದ ನಾಗವಾರ ಜಂಕ್ಷನ್ ಕಡೆಗೆ ಬರುವ ವಾಹನಗಳು ಸ್ಪೆನ್ಸರ್ ರಸ್ತೆಯಲ್ಲಿ ಕಡ್ಡಾಯವಾಗಿ ಬಲ ತಿರುವು ಪಡೆದು – ಸ್ಪೆನ್ಸರ್ ರಸ್ತೆ ಮೂಲಕ ಕೋಲ್ಸ್ ರಸ್ತೆ ತಲುಪಿ ವೀರ‍್ಸ್ ರಸ್ತೆ ಮೂಲಕ ಹೆಣ್ಣೂರು, ಬಾಣಸವಾಡಿ, ಹಲಸೂರು ಕಡೆಗೆೆ ಸಂಚರಿಸಬಹುದಾಗಿದೆ.
೩. ಆರ್.ಟಿ.ನಗರ ದಿಂದ ಮತ್ತು ಕಾವಲ್ ಬೈರಸಂದ್ರ ಮೂಲಕ ಬರುವ ವಾಹನಗಳು ಪುಷ್ಪಾಂಜಲಿ ಟಾಕೀಸ್ ಬಳಿ ಎಡ ತಿರುವು ಪಡೆದು ವೀರಣ್ಣ ಪಾಳ್ಯ ಜಂಕ್ಷನ್ ಕಡೆಗೆ ಬಲ ತಿರುವು ಪಡೆದು ನಾಗವಾರ ಜಂಕ್ಷನ್ ರಸ್ತೆ ಕಡೆಗೆ ಸಂಚರಿಸಬಹುದಾಗಿರುತ್ತದೆ.
೪. ನೇತಾಜಿ ರಸ್ತೆ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗವಾರ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ – ನೇತಾಜಿ ಜಂಕ್ಷನ್‌ನಿದ – ಬಲತಿರುವು – ಮಾಸ್ಕ್ ಜಂಕ್ಷನ್ – ಲಾಜರ್ ರಸ್ತೆ ಎಂ.ಎ.ರಸ್ತೆ ಜಂಕ್ಷನ್ – ಎಡತಿರುವು – ಪಾಟರಿ ರಸ್ತೆ ಹೆಣ್ಣೂರು ರಸ್ತೆ ಜಂಕ್ಷನ್ – ಬಲತಿರುವು – ಹೆಚ್.ಎಂ.ರಸ್ತೆ ಡೇವಿಸ್ ರಸ್ತೆ ಜಂಕ್ಷನ್ ಮೂಲಕ ಲಿಂಗರಾಜಪುರ ಫ್ಲೆಓವರ್ಮು ಖೇನ ಹೆಣ್ಣೂರು ಕಡೆಗೆ ಸಂಚರಿಸಬಹುದಾಗಿದೆ.
೫. ಲಾಜರ್ ರಸ್ತೆ ಮತ್ತು ಎಂ.ಎ.ರಸ್ತೆ ಜಂಕ್ಷನ್‌ನಲ್ಲಿ ಮಾಸ್ಕ್ ಸರ್ಕಲ್ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್ ರಸ್ತೆಯಲ್ಲಿ ಮುಂದುವರೆದು ಸಿಂಧಿ ಕಾಲೋನಿ ಜಂಕ್ಷನ್ –ವೀಲರ್ ರಸ್ತೆ ಮೂಲಕ –ಕೀರ್ತಿ ಸಾಗರ್ – ಥಾಮಸ್ಬೇಕರಿ – ಥಾಮಸ್ ಕೆಫೆ ಜಂಕ್ಷನ್ – ಬಲತಿರುವು – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೆನ್ಸ್ ಸರ್ಕಲ್ ಕಡೆಗೆ
ಸಂಚರಿಸಬಹುದಾಗಿದೆ.
೬. ಹೆಚ್.ಎಂ.ರಸ್ತೆ ಮೂಲಕ ಪಾಟರಿ ರಸ್ತೆ ಕಡೆಗೆ ಬರುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ಹೆಚ್.ಎಂ.ರಸ್ತೆಯಲ್ಲಿ
ಕಡ್ಡಾಯವಾಗಿ ಎಡ ತಿರುವು ಪಡೆದು – ಲಾಜರ್ ರಸ್ತೆ – ಸಿಂಧಿ ಕಾಲೋನಿ ಜಂಕ್ಷನ್ – ವೀರ‍್ಸ್ ರಸ್ತೆ ಮೂಲಕ ಕೀರ್ತಿ
ಸಾಗರ್ – ಥಾಮಸ್ ಬೇಕರಿ – ಥಾಮಸ್ ಕೆಫೆ ಜಂಕ್ಷನ್ – ಬಲತಿರುವು – ಸೆಂಟ್ ಜಾನ್ಸ್ ಚರ್ಚ್ ರಸ್ತೆ ಮೂಲಕ ಹೆನ್ಸ್
ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
ಪಾರ್ಕಿಗ್ ನಿರ್ಬಂಧಿಸಿರುವ ಸ್ಥಳಗಳು:
ಪಾಟರಿ ಸರ್ಕಲ್ ನಿಂದ ನಾಗವಾರ ಸಿಗ್ನಲ್, ಗೋವಿಂದಪುರ ಜಂಕ್ಷನ್‌ನಿದ ಗೋವಿಂದಪುರ ಪೊಲೀಸ್
ಠಾಣೆಯವರೆಗೆ ಮತ್ತು ಹೆಚ್.ಬಿ.ಆರ್ ಬಡಾವಣೆಯ ಸಿದ್ದಪ್ಪ ರೆಡ್ಡಿ ಜಂಕ್ಷನ್‌ನಿದ ನರೇಂದ್ರ ಟೆಂಟ್ ಜಂಕ್ಷನ್‌ವರೆಗೆ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.
ನೇತಾಜಿ ಜಂಕ್ಷನ್‌ನಿದ ಹೆನ್ಸ್ ಸರ್ಕಲ್‌ವರೆಗೆ, ಹೆನ್ಸ್ ಸರ್ಕಲ್ ನಿಂದ ನ್ಯೂ ಬಂಬೂ ಬಜಾರ್ ಸರ್ಕಲ್‌ವರೆಗೆ, ಹೆನ್ಸ್
ಸರ್ಕಲ್‌ನಿಂದ ಹಜ್ ಕ್ಯಾಂಪ್‌ವರೆಗೆ ಮತ್ತು ಲಾಜರ್ ರಸ್ತೆಯಿಂದ ವೀರ‍್ಸ್ ರಸ್ತೆಯ ಥಾಮಸ್ ಕೆಫೆ ಜಂಕ್ಷನ್‌ವರೆಗೆ ರಸ್ತೆಯ ಎರಡು ಬದಿಯಲ್ಲಿ ವಾಹನಗಳ ಪಾರ್ಕಿಂಗ್ ಅನ್ನು ನಿರ್ಬಂಧಿಸಲಾಗಿರುತ್ತದೆ.
ಈ ಮೇಲ್ಕಂಡತೆ ಮಾಡಲಾದ ಮಾರ್ಪಾಡುಗಳಿಗೆ ಸಾರ್ವಜನಿಕರು ಸಹಕರಿಸಲು ಕೋರಿದೆ.