ದಿನಾಂಕ 18 -08-2021 ರಂದು ಮಾನ್ಯ ಗೃಹಮಂತ್ರಿಗಳಾದ ಶ್ರೀ ಅರಗ ಜ್ಞಾನೇಂದ್ರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರು ನಗರ ಪೊಲೀಸ್ ಜಪ್ತಿ ಮಾಡಿದ ಕಳವು ಮಾಲುಗಳ ಪ್ರದರ್ಶನ ಹಾಗೂ ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮ ನಡೆಯಿತು. 56 ಕೋಟಿ ಮೌಲ್ಯದ 27 ಕೆಜಿ ಚಿನ್ನ, ಮೊಬೈಲ್ ಫೋನ್ ಮುಂತಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಕೆಲ ಪ್ರಕರಣಗಳಲ್ಲಿ ಒಡವೆಗಳು, ಒಂದು ಕಾರ್ ಮೂಲ ವಾರಸುದಾರರಿಗೆ ಹಿಂದಿರುಗಿಸಲಾಯಿತು.
ಕಳವು ಪ್ರಕರಣಗಳನ್ನು ಭೇದಿಸಿ ಇಷ್ಟೊಂದು ಜಪ್ತಿ ಕಾರ್ಯ ಕೈಗೊಂಡ 443 ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಒಟ್ಟು 16.58 ಲಕ್ಷ ಬಹುಮಾನ ನೀಡಲಾಯಿತು.


ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
