ಬೆಂಗಳೂರು ನಗರ ಪೊಲೀಸರು ಜುಲೈ ತಿಂಗಳಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಒಟ್ಟು 378 ಪ್ರಕರಣಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳಲ್ಲಿ 47 ಅಂತರರಾಜ್ಯ ಆರೋಪಿಗಳನ್ನು ಒಳಗೊಂಡಂತೆ 474 ಭಾರತೀಯರನ್ನು ಹಾಗೂ 13 ವಿದೇಶಿ ಪ್ರಜೆಗಳನ್ನು ಬಂಧಿಸಿರುತ್ತಾರೆ. ಅವುಗಳಲ್ಲಿ 12 ಪ್ರಕರಣಗಳನ್ನು ಡಗ್ ಪೆಡ್ಲರ್‌ಗಳ ಮೇಲೂ ಹಾಗೂ 306 ಪ್ರಕರಣಗಳನ್ನು ಡ್ರಗ್ಸ್ ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಂದುವರೆದು ಅಕ್ರಮವಾಗಿ ನೆಲೆಸಿದ್ದ || ಜನ ವಿದೇಶಿಯರನ್ನು ಜುಲೈ ತಿಂಗಳಿನಲ್ಲಿ ಗಡಿಪಾರು ಮಾಡಲಾಗಿರುತ್ತದೆ. ಮೇಲಿನ ಪ್ರಕರಣಗಳಲ್ಲಿ ಅಂದಾಜು ಮೌಲ್ಯ 18 ಕೋಟಿ ರೂ ಬೆಲೆ ಬಾಳುವ 1,785 ಕೆ.ಜಿ.ಯಷ್ಟು ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಗಾಂಜಾ 1,723 ಕೆ.ಜಿ. ಅಫೀಮು-55.895 ಕೆ.ಜಿ, ಹೆರಾಯಿನ್ 4) ಗ್ರಾಂ, ಹಾಶಿಷ್ ಆಯಿಲ್ 1.02 ಕೆ.ಜಿ. ಚರಸ್ 4?ಗ್ರಾಂ, ಕೋಕೈನ್ 57) ಗ್ರಾಂ, ಎಂ.ಡಿ.ಎಂ.ಎ-3.198 ಕೆ.ಜಿ, ಮತ್ತು 572 ವಿವಿಧ ರೀತಿಯ ಮಾತ್ರೆಗಳು ಹಾಗೂ 43 ಎಲ್‌ಎಸ್‌ಡಿ ಸ್ಪಿಪ್ಸ್ ಒಳಗೊಂಡಿರುತ್ತದೆ.
ಜುಲೈ ತಿಂಗಳಿನಲ್ಲಿ ಬೆಂಗಳೂರು ನಗರ ಪೊಲೀಸರು ಶಿಕ್ಷಣ ಸಂಸ್ಥೆಗಳ ಬಳಿ ಮಾದಕ ವಸ್ತು ಪದಾರ್ಥಗಳ ಮಾರಾಟ ಮಾಡುತ್ತಿದ್ದವರ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸಿ ಅವರ ವಿರುದ್ಧ 21 ಪ್ರಕರಣಗಳನ್ನು ಮತ್ತು ಸೇವನೆ ಮಾಡುತ್ತಿದ್ದವರ ವಿರುದ್ಧ 32 ಪ್ರಕರಣಗಳನ್ನು ದಾಖಲಿಸಿರುತ್ತಾರೆ. ಮುಂದುವರೆದು ಕಾಟ್ಟ (COTPA) ಕಾಯ್ದೆಯಡಿಯಲ್ಲಿ ಶಾಲಾ ಕಾಲೇಜುಗಳ 100 ಯಾರ್ಡ್ ಆವರಣದ ಒಳಗೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದವರ ವಿರುದ್ಧ 24 ಪ್ರಕರಣಗಳನ್ನು ದಾಖಲಿಸಿರುತ್ತಾರೆ ಹಾಗೂ 3588 ಲಘು ಪ್ರಕರಣ ದಾಖಲಿಸಿ 5,99,350 ರೂಗಳ ದಂಡ ವಿಧಿಸಿರುತ್ತಾರೆ.
ಬೆಂಗಳೂರು ನಗರದ ಪೊಲೀಸ್ ಅಧಿಕಾರಿಗಳು ಪ್ರಸ್ತುತ ತಿಂಗಳಲ್ಲಿ 118 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಾಧಕ ವಸ್ತುಗಳ ಸೇವನೆ ಮಾಡುವುದರಿಂದ ಆಗುವ ದುಷ್ಪರಿಣಾಗಳ ಬಗ್ಗೆ ಹಾಗೂ ಎಸ್.ಡಿ.ಪಿ.ಎಸ್ ಕಾಯ್ದೆ, ಎನ್.ಡಿ.ಪಿ.ಎಸ್ ಪೊರ್ಟಲ್ ಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಿರುತ್ತಾರೆ.