ಬೆಂಗಳೂರಿನ ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆ ನಡೆಸಿದ್ದಾರೆ.ಬರೋಬ್ಬರಿ 7 ಕೋಟಿ ಮೌಲ್ಯದ ಚಿನ್ನಾಭರಣ ,ಗಾಂಜಾ,ಅಂಬರ್ ಗ್ರೀಸ್ ,ತಿಮಿಂಗಿಲ ವಾಂತಿ ,ಕಾರ್ ,ಬೈಕ್ ,ಹಾಗೂ ನಕಲಿ ಕರೆನ್ಸಿಯನ್ನು ವಶಕ್ಕೆ ಪಡೆದಿದ್ದಾರೆ..ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ಮಾಹಿತಿ ನೀಡಿದ್ರು.
ಸುದ್ದಗುಂಟೆಪಾಳ್ಯ ಪೊಲೀಸರಿಂದ ಕುಖ್ಯಾತ ಮನೆಗಳ್ಳ ಮಂಜನಾಥ್ ಬಂಧನವಾಗಿದೆ. ಆರೋಪಿಯಿಂದ 35 ಲಕ್ಷ ರೂಪಾಯಿ ಮೌಲ್ಯದ 700 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ 5 ಕೋಟಿ ರೂಪಾಯಿ ಬೆಲೆ ಬಾಳುವ 5 kg ತಿಮಿಂಗಿಲ ವಾಂತಿಯನ್ನು(ಅಂಬರ್ ಗ್ರೀಸ್) ವಶಕ್ಕೆ ಪಡೆದಿದ್ದು ಮಾರಾಟ ಮಾಡ್ತಿದ್ದ ತಮಿಳುನಾಡು ಮೂಲದ ಶಾಕಿರ್ನನ್ನು ಬಂಧಿಸಿದ್ದಾರೆ.
ಹುಳಿಮಾವು ಪೊಲೀಸರು ಗಾಂಜಾ ಮಾರಾಟ ಮಾಡ್ತಿದ್ದ ಆರೋಪಿ ನಾಗೇಶ್ ಬಂಧಿಸಿದ್ದು, 61ಲಕ್ಷ ರೂ ಮೌಲ್ಯದ 102 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ..ವಿಶಾಖಪಟ್ಟಣ ದಿಂದ ಗಾಂಜಾ ತಂದು ಮಾರಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ..
ಒಟ್ಟಾರೆ ಆಗ್ನೇಯ ವಿಭಾಗ ಪೊಲೀಸರ ಕಾರ್ಯಾಚರಣೆಗೆ ಡಿಸಿಪಿ ಶ್ರೀನಾಥ್ ಮಹದೇವ ಜೋಶಿ, ಕಮಿಷನರ್ ಕಮಲ್ ಪಂತ್ ಶ್ಲಾಘಿಸಿದ್ದಾರೆ..ನಗದು ಬಹುಮಾನ ಘೋಷಿಸಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,