25ರ ಹರೆಯದ ಪ್ಯಾಲೆಸ್ತೀನ್ ಪ್ರಜೆಯನ್ನು ಕೇಂದ್ರ ಅಪರಾಧ ವಿಭಾಗ (C.C.B) (ಸಿಸಿಬಿ) ಮಾದಕ ದ್ರವ್ಯ ದಂಧೆಗಾಗಿ ಬಂಧಿಸಿದೆ.ಯಲಹಂಕ ನ್ಯೂ ಟೌನ್ ನಿವಾಸಿಯಾಗಿರುವ ಹಸನ್ ಡಬ್ಲ್ಯೂ ಎ ಹಶೆಮ್ ಎಂಬಾತ ವಿದ್ಯಾರ್ಥಿಗಳು ಮತ್ತು ಇತರ ಗ್ರಾಹಕರಿಗೆ ಎಂಡಿಎಂಎ ಹರಳುಗಳನ್ನು ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಮಾದಕ ದ್ರವ್ಯ ನಿಗ್ರಹ ದಳ(The Anti-Narcotics Wing ) ಈತನನ್ನು ಬಂಧಿಸಿ ಆತನಿಂದ 25 ಲಕ್ಷ ಮೌಲ್ಯದ ಸುಮಾರು 320 ಗ್ರಾಂ ಎಂಡಿಎಂಎ ಹರಳುಗಳನ್ನು ವಶಪಡಿಸಿಕೊಂಡಿದೆ.ಈತನ ವಿರುದ್ಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನ ಸಹಚರರ ಪತ್ತೆಗೆ ಸಿಸಿಬಿ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಸಿಸಿಬಿ ಪ್ರಕಾರ, ಹಾಷೇಮ್ ಆರು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಬೆಂಗಳೂರಿಗೆ ಬಂದರು ಮತ್ತು ಅಧ್ಯಯನ ಮುಗಿಸಿ ತನ್ನ ದೇಶಕ್ಕೆ ಮರಳಿದ್ದರು.ಆದರೆ ಕೆಲ ತಿಂಗಳ ಹಿಂದೆ ಬಿಸಿನೆಸ್ ವೀಸಾದ ಮೇಲೆ ವಾಪಸ್ ಬಂದು ಡ್ರಗ್ಸ್ ದಂಧೆ ಆರಂಭಿಸಿದ್ದರು. ಈತ ಸುಡಾನ್‌ನಿಂದ ಎಂಡಿಎಂಎ ತರಿಸಿಕೊಂಡು ತನ್ನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ಗ್ರಾಂಗೆ 8 ಸಾವಿರದಿಂದ 8500 ರೂ.