ಹಿರಿಯ ಅಧಿಕಾರಿಯವರ ಮಾರ್ಗದರ್ಶನದಂತೆ, 1) ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯ ಭಾತಂಬ್ರಾ ಗ್ರಾಮದ ಮೇಥಿ ಮೇಳಕುಂದಾ ಕ್ರಾಸ್ ಹತ್ತಿರದಿಂದ ಸರಕಾರದಿಂದ ಸಾರ್ವಜನಿಕರಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿಯಂತೆ ಪಿ.ಎಸ್.ಐ ಶ್ರೀಮತಿ, ಸುವರ್ಣಾ ರವರು ತಮ್ಮ ಸಿಬ್ಬಂದಿ ಶ್ರೀ, ಉಮಾಕಾಂತ, ಶ್ರೀ, ಸ್ವಾಮಿದಾಸ, ಶ್ರೀ, ಗುರುನಾಥ ರವರೊಂದಿಗೆ ಶ್ರೀ, ವೆಂಕಟ, ಆಹಾರ ಶಿರಸ್ತೆದಾರರು, ಭಾಲ್ಕಿ ತಹಶೀಲ್ ಕಛೇರಿ ರವರ ಸಮಕ್ಷಮ ದಾಳಿ ಮಾಡಿ 14 ಕ್ವಿಂಟಲ್ ಅಕ್ಕಿ ಒಂದು ಗುಡ್ಸ್ ವಾಹನ ಹೀಗೆ ಒಟ್ಟು ಅ:ಕಿ: 1,97,600=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡಿರುತ್ತಾರೆ.
ಅದರಂತೆ 2) ಹಳ್ಳಿಖೇಡ್-ಬಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬಿಗುಂದಿ ಲೇಔಟ್ ಹತ್ತಿರ ಪಡಿತರ ಅಕ್ಕಿ ಸಾಗಿಸುತ್ತಿರುವ ಮಾಹಿತಿಯಂತೆ ಹಳ್ಳಿಖೇಡ್-ಬಿ ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ, ಅಯ್ಯಪ್ಪಾ ರವರು ತಮ್ಮ ಸಿಬ್ಬಂದಿ ಶ್ರೀ, ಈಕೇಶ, ಶ್ರೀ, ಕರಿಲಿಂಗ್, ಶ್ರೀ, ಪ್ರತಾಪರೆಡ್ಡಿ ರವರೊಂದಿಗೆ ಶ್ರೀಮತಿ, ಬಿಂದುಕುಮಾರಿ, ಆಹಾರ ನಿರೀಕ್ಷಕರು, ಹುಮನಾಬಾದ ರವರ ಸಮಕ್ಷಮ ದಾಳಿ ಮಾಡಿ 3 ಕ್ವಿಂಟಲ್ 19 ಕೆ.ಜಿ ಅಕ್ಕಿ ಎರಡೂ ಟಿ.ವಿ.ಎಸ್ ದ್ವೀಚಕ್ರ ವಾಹನಗಳು ಹೀಗೆ ಒಟ್ಟು 45,846=00 ರೂಪಾಯಿ ಹೀಗೆ ಒಟ್ಟು 2,43,446=00 ರೂಪಾಯಿ ಮೌಲ್ಯದ ಪಡಿತರ ಅಕ್ಕಿ ಮತ್ತು ವಾಹನಗಳನ್ನು ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹೀಗೆ ಒಟ್ಟು 2,43,446=00 ರೂಪಾಯಿ ಮೌಲ್ಯದ ಅಕ್ರಮ ಅಕ್ಕಿ ಮತ್ತು ವಾಹನಗಳನ್ನು ವಶ ಪಡಿಸಿಕೊಂಡ ಭಾಲ್ಕಿ ಗ್ರಾಮೀಣ ಮತ್ತು ಹಳ್ಳಿಖೇಡ್-ಬಿ ಪೊಲೀಸ್ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಲಾಗಿದೆ.
ವರದಿ :- ಸಿದ್ದು ಪಟ್ಟೇದಾರ್