ಕಳೆದ ಎರಡು ಮೂರು ತಿಂಗಳಿನಿಂದ ಔರಾದ(ಬಿ) ಪಟ್ಟಣದಲ್ಲಿ ಹಲವಾರು ದ್ವಿಚಕ್ರ ವಾಹನಗಳು ಕಳುವು ಆಗುತ್ತಿದ್ದು. ಈ ಎಲ್ಲಾ ಪ್ರಕರಣಗಳ ದ್ವಿಚಕ್ರ ವಾಹನ ಪತ್ತೆ ಹಾಗು ಅಪರಿಚಿತಆರೋಪಿ ಪತ್ತೆಕುರಿತು ಶ್ರೀ ನಾಗೇಶ ಡಿ ಎಲ್, ಪೊಲೀಸ್ಅಧೀಕ್ಷಕರು ಬೀದರ ಮತ್ತು ಶ್ರೀ ಗೋಪಾಲ ಎಮ್, ಬ್ಯಾಕೋಡ ಹೆಚ್ಚುವರಿ ಪೊಲೀಸ್ಅಧಿಕ್ಷಕರು ಬೀದರ, ಶ್ರೀ ಡಾ||ದೇವರಾಜ ಬಿ. ಪೊಲೀಸ್ಉಪಾಧೀಕ್ಷಕರು ಭಾಲ್ಕಿ ಉಪ-ವಿಭಾಗರವರ ಮಾರ್ಗದರ್ಶನದಲ್ಲಿ ಶ್ರೀ ರವೀಂದ್ರನಾಥ, ಸಿಪಿಐ ಔರಾದ(ಬಿ) ವೃತ್ತರವರ ನೇತೃತ್ವದಲ್ಲಿಔರಾದ(ಬಿ) ಪೊಲೀಸ್ಠಾಣೆಯ ಪಿಎಸ್ಐ ಶ್ರೀ ಮಂಜನಗೌಡ ಪಾಟೀಲ (ಕಾ.ಸೂ), ಶ್ರೀ ಮಾಧವಎಎಸ್ಐ ಹಾಗೂ ಸಿಬ್ಬಂದಿಯವರಾದ ನರಸಾರೆಡ್ಡಿ, ಶ್ರಿನಿವಾಸ, ಶಿವಯೋಗೆಪ್ಪ, ಅನಿಲರೆಡ್ಡಿರವರಒಂದು ವಿಶೇಷ ತಂಡ ರಚಿಸಿದ್ದು ಕಳುವು ಮಾಡಿದ ವಾಹನಗಳನ್ನು ತೋರಿಸಿದ ಪ್ರಕಾರಜಪ್ತಿ ಪಡಿಸಿಕೊಂಡಿದ್ದು ಹಾಗೂ ಆರೋಪಿ ಶಿವಾಜಿ@ಶಿವಾ ಇತನು ದಿನಾಂಕ 11-03-2021 ರಂದುಔರಾದ ಪಟ್ಟಣದಲ್ಲಿಒಬ್ಬ ಮಹಿಳೆಯಿಂದ ದೊಚಿದ ಬಂಗಾರ ಹಾಗೂ ಬೆಳ್ಳಿ ಆಭರಣ ಮಾರಿದ 15000/- ರೂ ತೋರಿಸಿದ್ದು ಪಂಚರ ಸಮಕ್ಷಮಜಪ್ತ ಮಾಡಿಕೊಂಡುದಸ್ತಗಿರಿಕ್ರಮ ಪಾಲಿಸಿ ಮಾನ್ಯ ನ್ಯಾಯಾಲಯಕ್ಕೆ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರು ಪಡಿಸಲಾಗಿದೆ. ಸದರಿ ಪ್ರಕರಣದಲ್ಲಿಕರ್ತವ್ಯ ನಿರ್ವಹಿಸಿದ ಎಲ್ಲಾಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಮಾನ್ಯ ಪೊಲೀಶ್ ಅಧೀಕ್ಷಕರು, ಬೀದರ ರವರು ಶ್ಲಾಘಿಸಿದ್ದಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್