ದಿನಾಂಕ; 15/02/2022 ರಂದು ಮುಂಜಾನೆ 10:30 ಗಂಟೆಗೆ ಮಾನ್ಯ ಶ್ರೀ ಡಿ.ಕಿಶೋರ್ ಬಾಬು ಐಪಿಎಸ್. ಬೀದರ ಜಿಲ್ಲೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಡಾ: ಗೋಪಾಲ್ ಬ್ಯಾಕೋಡ್ ರವರು ಶಕ್ತಿ ಪಡೆಯನ್ನು ಚಾಲನೆ ನೀಡಿದರು. ಬೀದರ ಜಿಲ್ಲಾ ಪೊಲೀಸ್ ವತಿಯಿಂದ ಬೀದರ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಚನ್ಯ ತಡೆಗಟ್ಟಲು ಮತ್ತು ಮಹಿಳೆ ಮತ್ತು ಮಕ್ಕಳಿಗೆ ತುರ್ತು ಸ್ಪಂದಿಸಲು ಅವರ ನೆರವಿಗೆ ಶಕ್ತಿ ಪಡೆಯೊಂದನ್ನು ರಚನೆ ಮಾಡಲಾಗಿದೆ. ಇದರಲ್ಲಿ ಒಬ್ಬರು ಪಿಎಸ್‍ಐ ಮತ್ತು ಎರಡು ತಂಡದಲ್ಲಿ ಮಹಿಳಾ ಸಿಬ್ಬಂದಿಯವರನ್ನೊಳಗೊಂಡಿರುತ್ತದೆ.
