ದಿನಾಂಕ: 03.10.2023 ರಂದು ಶ್ರೀ. ಸಂದೀಪ್. ಎಲ್ ರವರು ನೀಡಿದ ದೂರಿನಲ್ಲಿ ಆರೋಪಿಯು ಬಿ.ಬಿ.ಎಂ.ಪಿ ಯಲ್ಲಿ ಕೆಲಸಮಾಡಿಕೊಂಡಿರುವುದಾಗಿ ನುಬಿಸಿ, ಬಿ.ಬಿ.ಎಂ.ಪಿ ಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ನೌಕರಿಗೆ, ನೇಮಕ ಮಾಡಿಕೊಳ್ಳುತ್ತಿದ್ದು, 3000/- ಹಣವನ್ನು ನೀಡಿದರೆ, ನೇಮಕಾತಿ ಮಾಡಿಸುವುದಾಗಿ ನುಬಿಸಿ, 200ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳಿಂದ ತಲ್ಲಾ ಕೆ 3000/- ಹಣವನ್ನು ಫೋನ್ ವೇ ಮೂಲಕ ಪಡೆದುಕೊಂಡಿರುತ್ತಾನೆ. ಹಾಗೂ ನಕಲಿ ನೇಮಕಾತಿ ಆದೇಶದ ಪ್ರತಿಗಳನ್ನು ಸೃಷ್ಟಿಸಿ, ಅವುಗಳನ್ನೇ ನೈಜವಾದುವುಗಳೆಂದು ಬಿಂಬಿಸಿ, ವಾಟ್ಸಪ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಳುಹಿಸಿಕೊಟ್ಟಿರುತ್ತಾನೆ. ಈ ಕುರಿತು ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ.
ತನಿಖೆ ಕೈಗೊಂಡ ತನಿಖಾಧಿಕಾರಿಗಳು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ಆತನಿಂದ ಈ ಕೆಳಕಂಡ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.
- ಮಾರ್ಷಲ್ ನೌಕರಿಗೆ ನೇಮಕಾತಿ ಆದೇಶ ಇರುವ ಬಿ.ಬಿ.ಎಂ.ಪಿಯ ಹೆಸರಿನಲ್ಲಿರುವ ನೇಮಕಾತಿ ಆದೇಶದ ಪ್ರತಿ
- ಆರೋಪಿತನ ಹೆಸರಿನಲ್ಲಿರುವ ಬಿ.ಬಿ.ಎಂ.ಪಿಯ ಗುರುತಿನ ಚೀಟಿ,
- ಫೋನ್ ಪೇ ಮೂಲಕ ಹಣವನ್ನು ಪಡೆದಿರುವ ಬಗ್ಗೆ ಸ್ಟೀನ್ ಶಾಟ್ ಪ್ರತಿಗಳು, 4. ಆರೋಪಿತನ ಪ್ಯಾನ್ ಕಾರ್ಡ್, ಇನ್ನು ಮುಂತಾದುವುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಶ್ರೀ ಶೇಖರ್, ಹಚ್‌ಟಿ, ಉಪ-ಪೊಲೀಸ್ ಆಯುಕ್ತರು, ಕೇಂದ್ರ ವಿಭಾಗ, ಮತ್ತು
ಶ್ರೀಶಿವಾನಂದ ಚಲವಾದಿ, ಎಸಿಪಿ, ಹಲಸೂರಗೇಟ್ ರವರ ಮಾರ್ಗದರ್ಶನದಲ್ಲಿ, ಹಲಸೂರುಗೇಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್, ಶ್ರೀಹನುಮಂತ ಭಜತಿ ರವರು ಹಾಗೂ ಸಿಬ್ಬಂದಿಗಳ ತುಡ ಆರೋಪಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ..