ಪ್ರಯಾಣಿಕರಿಗೆ ಸಹಕಾರ ನೀಡದ ಆಟೋ ಚಾಲಕರಿಗೆ ತೀವ್ರ ಎಚ್ಚರಿಕೆ ನೀಡಿದ ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್.
ನಗರ ಹೃದಯ ಭಾಗದಲ್ಲಿರುವ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕೆ ಉಪ್ಪಾರಪೇಟೆ ಪೊಲೀಸ್ ಠಾಣೆ ಆಶ್ರಯ ದಿಂದ ಪ್ರಿಪೇಯ್ಡ್ ಆಟೋ ಬೂತ್ ಕಲ್ಪಿಸುವುದರ ಮೂಲಕ ಆಟೋ ರಿಕ್ಷಾ ಪ್ರಯಾಣಿಕರು ಪರದಾಡುತ್ತಿದ್ದ ಬವಣೆಯನ್ನು ತಪ್ಪಿಸಿದ್ದಾರೆ.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಮತಿ ಅನಿತಾ ಹದ್ದಣ್ಣವರ್ ಇತ್ತೀಚಿಗೆ ಆಟೋ ಚಾಲಕರು ಪಯಣಕರು ಕರದ ಕಡೆಗೆ ಬಾರದೆ ದುಪ್ಪಟ್ಟು ಹಣ ಕೇಳುವುದರ ಬಗ್ಗೆ ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿ ಆಟೋ ಚಾಲಕರಿಗೆ ಎಚ್ಚರಿಸಿದರು. ಆಟೋ ಚಾಲಕರು ದುರವರ್ತನೆ ಸುಧಾರಿಸಿಕೊಳ್ಳದೆ ಹೋದರೆ ಕಠಿಣ ಕ್ರಮ ಜರಗಿಸಬೇಕಾಗುತ್ತದೆ ಎಂದವರು ಆಟೋ ಚಾಲಕರು ಪ್ರಾಣಿಕರ ಜೊತೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳುವುದರ ಮೂಲಕ ಪ್ರಯಾಣಿಕರು ಕರದ ಕಡೆ ಕರೆದುಕೊಂಡು ಹೋಗಬೇಕೆಂದು ತಿಳಿಸುವುದರ ಜೊತೆಗೆ ಆಟೋ ಚಾಲಕರು ತಮ್ಮ ನ್ಯಾಯ ಬದ್ಧ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತಂದರೆ ಅಂತಹ ಸಮಸ್ಯೆಗಳನ್ನು ಪರೀಕ್ಷಿಸಿ ಪರಿಹರಿಸುವುದಾಗಿ ತಿಳಿಸಿ ಮಾತನಾಡುತ್ತಿದ್ದ ಅವರು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರಿಪೇಯ್ಡ್ ಬೂತ್ ತೆರೆಯುವ ಬಹುದಿನದ ಪ್ರಯಾಣಿಕರ ಬೇಡಿಕೆಯನ್ನು ಇದೀಗ ಈಡೇರಿಸಿದ್ದೇವೆ ಅದರ ಸದುಪಯೋಗ ವನ್ನು ಪ್ರಯಾಣಿಕರು ಉಪಯೋಗಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಚಾರ ವಿಭಾಗದ ಎಸಿಪಿ ರವರಾದ ಶ್ರೀಮತಿ ಪುಟ್ಟಮ್ಮನವರು ಪ್ರಯಾಣಿಕರ ಸದ್ದುದೇಶಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಉಪ್ಪಾರ್ಪೇಟೆ ಠಾಣೆ ವತಿಯಿಂದ ಪ್ರಿಪೇಯ್ಡ್ಬೂತ್ ನಿರ್ಮಿಸಲು ಉಪ್ಪಾರಪೇಟೆ ಠಾಣೆಯ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ಕೃಷ್ಣ ಮೂರ್ತಿಯವರು ಮುತುವರ್ಜಿ ವಹಿಸಿ ಶ್ರಮವಹಿಸಿದ್ದಾರೆಂದು ಅವರ ಕಾರ್ಯಕ್ಕೆ ಶ್ಲಾಘನೇ ವ್ಯಕ್ತಪಡಿಸಿದರು.
ಆಟೋ ಚಾಲಕರು ಪ್ರಯಾಣಿಕರ ಜೊತೆ ಸೌಜನ್ಯದಿಂದ ನಡೆದುಕೊಳ್ಳಬೇಕೆಂದು ಚಾಲಕರಿಗೆ ಕಿವಿಮಾತು ಹೇಳಿದರು. ಇಂದಿನ ಈ ಕಾರ್ಯಕ್ರಮ ಪೊಲೀಸರ ಮತ್ತು ನಾಗರಿಕರ ಸ್ನೇಹ ಹಸ್ತದ ಕೊಂಡಿ ಯಾಗಿದೆ ಸಾರ್ವಜನಿಕರು ವ್ಯವಸ್ಥೆ ಗೋಸ್ಕರ ಪೊಲೀಸರ ಜೊತೆ ಸ್ನೇಹ ಬಾಂಧವ್ಯವನ್ನು ಬೆಳಿಸಿಕೊಳ್ಳಬೇಕೆಂದು ತಿಳಿಸುವುದರ ಮೂಲಕ ಆಟೋ ಚಾಲಕರಿಗೆ ಆಗಗ್ಗೆ ಸಭೆಗಳನ್ನು ನಡೆಸುವುದರ ಮೂಲಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರಯಾಣಿಕರ ಜೊತೆ ಹೇಗೆ ನಡೆದುಕೊಳ್ಳಬೇಕೆಂಬುದರ ಬಗ್ಗೆ ತಿಳುವಳಿಕೆ ಮತ್ತು ಮಾರ್ಗದರ್ಶನ ನೀಡಲಾಗುವುದೆಂದು ತಿಳಿಸಿದರು.
ಬಹುತೇಕ ಆಟೋ ಚಾಲಕರು ಪ್ರಯಾಣಿಕರು ಕರದ ಕಡೆ ಹೋಗುವುದಿಲ್ಲ ಎಂಬ ದೂರು ಬಹಳವಾಗಿ ಕೇಳಿ ಬರುತ್ತಿದೆ ಈ ವಿಷಯದಲ್ಲಿ ಸಂಚಾರ ಪೊಲೀಸರು ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಲ್ಲದೆ ಕರದ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗದ ಆಟೋ ಚಾಲಕರ ಮೇಲೆ ತೀವ್ರ ಕ್ರಮ ತೆಗೆದುಕೊಳ್ಳುವುದರಲ್ಲಿ ಹಿಂದೂ ಮುಂದು ನೋಡುವುದಿಲ್ಲವೆಂದು ಆಟೋ ಚಾಲಕರಿಗೆ ಎಚ್ಚರಿಕೆಯ ಘಂಟೆ ನೀಡಿದರು.
ಉಪ್ಪಾರ್ಪೇಟೆಯ ಕಾನೂನು ವ್ಯವಸ್ಥೆಯ ಇನ್ಸ್ಪೆಕ್ಟರ್ ರವರು ಆಟೋ ಚಾಲಕರು ಪ್ರಯಾಣಿಕರ ಜೊತೆಗೆ ಉತ್ತಮ ರೀತಿಯಲ್ಲಿ ಹಿಡಿದುಕೊಳ್ಳಬೇಕು ಎಂದು ತಿಳಿಸಿದರು.
ರಾಜ್ಯ ಸಾರಿಗೆ ಸಂಸ್ಥೆಯ ಪಶ್ಚಿಮ ವಿಭಾಗದ ಅಧಿಕಾರಿ ಅರುಣ್ ಹಾಗೂ ಸಂಚಾರ ಡಿಟಿಓ ಭಾಗ್ಯಲಕ್ಷ್ಮಿ ಅವಂತಿ ರವರು ಕಾರ್ಯಕ್ರಮದಲ್ಲಿ ಪ್ರತಿನಿಧಿಸಿದ್ದರು.
ಚಿಕ್ಕಪೇಟೆ ಪೊಲೀಸ್ ಇನ್ಸ್ಪೆಕ್ಟರ್ ರಾಜು, ಉಪ್ಪಾರ್ಪೇಟೆ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀಮತಿ ಗಂಗಮ್ಮ, ನರಸಿಂಹಮೂರ್ತಿ, ಸರವಣ ಮತ್ತು ಸಂಚಾರ ವಿಭಾಗದ ಎಎಸ್ಐ ಸಿದ್ದರಾಜು, ವಿಶ್ವನಾಥ್ ಮತ್ತು ರಾಮ್ಮೂರ್ತಿ ಮುಂತಾದವರು ಭಾಗವಹಿಸಿದ್ದರು.
ಬಹುದಿನದ ಪ್ರಯಾಣಿಕರ ಬೇಡಿಕೆಯಾಗಿದ್ದ ಪ್ರಿಪೇಡ್ಬೂತ್ ಇಂದು ತಲೆ ಎತ್ತುವುದರ ಮೂಲಕ ಕನಸಾಗಿ ಕಂಡದ್ದು ಪ್ರಾಣಿಕರ ಸಮೂಹಕ್ಕೆ ಖುಷಿ ತಂದಂತಾಗಿದೆ.
ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳ ಮನವಲಿಸುವುದರ ಮೂಲಕ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಪ್ರಿಪೇಡ್ ಆಟೋ ಬೂತ್ ಉಸ್ತುವಾರಿ ಒತ್ತಿದ್ದ ಸಂಚಾರ ಪೊಲೀಸ್ ಇನ್ಸ್ಪೆಕ್ಟರ್ ರವರು ಸಾರ್ವಜನಿಕರ ಅಭಿನಂದನೆಗೆ ಪಾತ್ರರಾಗಿದ್ದಾರೆ.
ಬೂತ್ ನಿರ್ಮಾಣದಲ್ಲಿ ಸಹಕರಿಸಿದ ಉಪ್ಪಾರಪೇಟೆಯ ಎಲ್ಲಾ ಪೊಲೀಸರಿಗೂ ಕೃಷ್ಣಮೂರ್ತಿರವರು ಸಮಾರಂಭದ ಕೊನೆಯಲ್ಲಿ ಕೃತಜ್ಞತೆ ಸಲ್ಲಿಸಿದರು.