ದಿನಾಂಕ 29-6- 2021 .ಉತ್ತರ ಕನ್ನಡ ಜಿಲ್ಲೆಯ, ಶಿರಸಿ ತಾಲೂಕಿನ, ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ದೇವಸ್ಥಾನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಬನವಾಸಿ ಪೊಲೀಸ್ ಠಾಣೆಯ ಎರಡು ಪ್ರಕರಣಗಳನ್ನು ಬೇಧಿಸಿ ಸದರಿ ಆರೋಪಿತ ನಿಂದ ಕಳ್ಳತನ ಮಾಡಿದ ಭಾಷಿಯ ಶ್ರೀ ಕಾಳಿಕಾಂಬ ದೇವಸ್ಥಾನ ಹಾಗೂ ಬದನಗೋಡದ ಶ್ರೀ ಕಾನೇಶ್ವರಿ ದೇವಸ್ಥಾನದ 1) ಬಂಗಾರದ ತಾಳಿ ಸರ-01 ಅಜಮಾಸ 3ಗ್ರಾಂ,2) ಬಂಗಾರದ ಗುಂಡಿನ ಸರ-01 ಅಜಮಾಸ- 5 ಗ್ರಾಂ, ಅ.ಕಿ 23000 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿತನ ವಿವರ, ಶ್ರೀಧರ್@ ಸಿರಿ ತಂದೆ ಯಲ್ಲಪ್ಪ ಬಂಡಿವಡ್ಡರ್, 21 ವರ್ಷ ಉದ್ಯೋಗ ಕೂಲಿ ಕೆಲಸ ಸಾ: ಶೃಂಗೇರಿ, ತಾ: ಹಾನಗಲ್, ಜಿ:ಹಾವೇರಿ.
ಸದರಿ ಪ್ರಕರಣದಲ್ಲಿ ಮಾನ್ಯ ಶ್ರೀ ಶಿವಪ್ರಕಾಶ ದೇವರಾಜ್ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ, ಮಾನ್ಯ ಶ್ರೀ ಬದ್ರಿನಾಥ್ ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ, ಶ್ರೀ ರವಿ ಡಿ ನಾಯ್ಕ, ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ಉಪವಿಭಾಗ ಶಿರಸಿರವರ ಮಾರ್ಗದರ್ಶನದಲ್ಲಿ, ಮಾನ್ಯ ಶ್ರೀ ರಾಮಚಂದ್ರ ನಾಯಕ ಸಿಪಿಐ ಶಿರಸಿ ವೃತ್ತ, ಶಿರಸಿ ರವರ ನೇತೃತ್ವದಲ್ಲಿ ಶ್ರೀ ಹಣಮಂತ ಬಿರಾದರ ಪಿಎಸ್ಐ (ಕಾ&ಸು), ಶ್ರೀ ಬಾಲಕೃಷ್ಣ ಬಿ ಪಾಲೇಕರ್ ಪಿಎಸ್ಐ(ಅ.ವಿ), ಬನವಾಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿ ಅವರಾದ ಹೆಚ್.ಸಿ- 1643 ಸಂತೋಷ ತಳವಾರ, ಸಿಪಿಸಿ 1369 ಶಿವರಾಜ ಎಸ್, ಸಿಪಿಸಿ- 1056 ಮಂಜುನಾಥ, ಸಿಪಿಸಿ-1610 ವಿನಾಯಕ ಎಂ. ರವರು ಆರೋಪಿತನ ಬಗ್ಗೆ ಮಾಹಿತಿ ಸಂಗ್ರಹಿಸಿ, ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿರುತ್ತಾರೆ.
ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
ಜೆ .ಜಾನ್ ಪ್ರೇಮ್