ದಿನಾಂಕ 14.06.2023 ರಂದು ಬೆಂಗಳೂರು ನಗರದ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಠಿತ PUMA ಕಂಪನಿಯ Pants and T Shirts ಗಳನ್ನು ನಕಲು ಮಾಡಿ ಕಳಪೆ ಗುಣಮಟ್ಟದ ಬಟ್ಟೆಗಳಿಗೆ ಪ್ರತಿಷ್ಠಿತ ಕಂಪನಿಯ ಲೇಬಲ್ ಗಳನ್ನು ಹಾಕಿ \’ಅಸಲಿ\’ ಎಂದು ಸಾರ್ವಜನಿಕರಿಗೆ ನಂಬಿಸಿ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿ ಪ್ರತಿಷ್ಠಿತ ಕಂಪನಿಗಳಿಗೆ ನಷ್ಟವುಂಟು ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯ ಕಡೆಯಿಂದ ನಕಲಿ ಪೂಮಾ ಟಿ ಶರ್ಟ್ ಮತ್ತು ಪ್ಯಾಂಟ್ಗಳನ್ನು ವಶ ಪಡಿಸಿಕೊಂಡಿರುತ್ತೆವೆ ಇವುಗಳ ಮೌಲ್ಯ: 5,00,000/- ರೂ ಆಗಿರುತ್ತದೆ.
ಈ ಸಂಬಂಧ ಆರೋಪಿ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.