ದಿನಾಂಕ:-10-09-2023 ರಂದು ಪಿರ್ಯಾದಿ ಶ್ರೀ ಕಿಶೋರ್ ಕುಮಾರ್ ಕೆ.ಟಿ, ಪವನ್ ಬ್ಯೂಯಲರ್ಸ್ ಮಾಲೀಕರು, ವಿಜಯಲಕ್ಷ್ಮೀ ರಸ್ತೆ, ದಾವಣಗೆರೆ ರವರು ದಿನಾಂಕ:-09-09-2023 ರ ರಾತ್ರಿ 10-00 ರಿಂದ ದಿನಾಂಕ:- 10-09-2023 ರ ಬೆಳಿಗ್ಗೆ 10-00 ಗಂಟೆಯ ಮದ್ಯದ ಸಮಯದಲ್ಲಿ ಯಾರೋ ಕಳ್ಳರು ತಮ್ಮ ಬಾಪ್ತು ಪವನ್ ಜ್ಯೂಯೆಲರ್ಸ್ ಬೆಳ್ಳಿ ಬಂಗಾರದ ಅಂಗಡಿಯ ಶೆಟರ್ಸ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 2500/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 104/2023 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿರುತ್ತದೆ.
ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಶ್ರೀ ಆರ್.ಬಿ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ಶ್ರೀ ಮಲ್ಲೇಶ್ ದೊಡ್ಡಮನಿ, ಪೊಲೀಸ್ ಉಪಾಧೀಕ್ಷಕರು, ನಗರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್. ಗುರುಬಸವರಾಜ ರವರ ನೇತೃತ್ವದಲ್ಲಿ ಶ್ರೀ ಜಿ.ನಾಗರಾಜ ಪಿಎಸ್ಐ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿರುತ್ತದೆ.
ಸದರಿ ಪೊಲೀಸ್ ತಂಡವು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತರು ಹಾಗೂ ಸ್ವತ್ತಿನ ಪತ್ತೆ ಕಾರ್ಯ ಕೈಗೊಂಡಿದ್ದು, ವಿವಿಧ ಕಡೆ ಮಾಹಿತಿಯನ್ನು ಕಲೆಹಾಕಿ ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಮೇಲ್ಕಂಡ ಪ್ರಕರಣ ಆರೋಪಿತನಾದ ಜೀಬನ್ ಸಿಂಗ್ @ ಶಂಕರ್ ಸಿಂಗ್, ಸುಮಾರು 55 ವರ್ಷ, ಬಬಲಾದ ಗ್ರಾಮ, ಕಲಬುರಗಿ ಜಿಲ್ಲೆ, (ಸ್ವಂತ ಊರು: ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ) ಈತನನ್ನು ದಸ್ತಗಿರಿ ಮಾಡಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ದಾವಣಗೆರೆ ನಗರದಲ್ಲಿನ ಪವನ್ ನ್ಯೂಯೆಲರ್ಸ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಅಂಗಡಿಯಲ್ಲಿನ ಪೂಜಾ ಸಾಮಾನುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡು ಕಳ್ಳತನ ಮಾಡಿದ ಎಲ್ಲಾ ಬೆಳ್ಳಿಯ ವಸ್ತುಗಳನ್ನು ರಾಣೆಬೇನ್ನೂರು ನಗರದ ಎಂ.ಜಿ ರಸ್ತೆಯಲ್ಲಿರುವ ಬೆಳ್ಳಿ ಬಂಗಾರದ ಅಂಗಡಿಯೊಂದರ ಮಾಲಿಕನಿಗೆ ಮಾರಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದರಿಂದ, ಕಳ್ಳತನವಾದ ಮಾಲನ್ನು ಸ್ವೀಕರಿಸಿ ಬೆಳ್ಳಿಯನ್ನು ಕರಗಿಸಿದ ವ್ಯಕ್ತಿಯಿಂದ ಮೇಲ್ಕಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಾಜು 18 ಲಕ್ಷ ರೂ ಮೌಲ್ಯದ ಒಟ್ಟು 48 ಕೆ.ಜಿ 130 ಗ್ರಾಂ ಕಚ್ಚಾ ಬೆಳ್ಳಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಂಡಿರುತ್ತಾರೆ.
ಪ್ರರಕಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಹೆಚ್.ಗುರುಬಸವರಾಜ ರವರ ನೇತೃತ್ವದಲ್ಲಿ ಶ್ರೀ ಜಿ. ನಾಗರಾಜ ಪಿಎಸ್ಐ, ಶ್ರೀ ಮಂಜುನಾಥ ಕಲ್ಲೇದೇವರು ಪಿಎಸ್ಐ, ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ಶ್ರೀ ಮತಿ ವಿಶಾಲಾಕ್ಷಿ, ಪೂರ್ವಾಚಾರಿ, ಹರೀಶ್, ಸುರೇಶ್ ಟಿ., ಅಮರೇಶ್ ಸಂಗಮ್, ರಾಘವೇಂದ್ರ, ರಾಮಚಂದ್ರ ಜಾಧವ್ರವರನ್ನು ಶ್ರೀಮತಿ ಉಮಾ ಪ್ರಶಾಂತ, ಐಪಿಎಸ್ ಮಾನ್ಯ ಪೊಲೀಸ್ ಅಧೀಕ್ಷಕರು ಹಾಗೂ ಶ್ರೀ ಆರ್.ಬಿ ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ರವರುಗಳು ಶ್ಲಾಘಿಸಿರುತ್ತಾರೆ.