ಗಣೇಶ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಡಿಸಿರವರ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿಂದು ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಮಹಂತೇಶ್ ಬೀಳಗಿ ರವರ ಅಧ್ಯಕ್ಷತೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರವರಾದ ಶ್ರೀ ರಿಷ್ಯಂತ್ ಉಪಸ್ಥಿತಿಯಲ್ಲಿ ನಾಗರಿಕ ಸೌಹಾರ್ದ ಸಮನ್ವಯ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬ ಆಚರಿಸಲು ತಿಳಿಸಲಾಯಿತು. ಕೊರೊನಾ ಸುರಕ್ಷಿತ ಕ್ರಮಗಳನ್ನು ಪಾಲಿಸಿ ಕೋವಿಡ್ ನಿಂದ ಸುರಕ್ಷಿತವಾಗಿರಲು ತಿಳಿಸಲಾಯಿತು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿಯವರಾದ ಶ್ರೀ ರಾಜೀವ್ ಎಂ., ಪೂಜ್ಯ ಮಹಾ ಪೌರರರಾದ ಶ್ರೀ ವೀರೇಶ್ ಎಸ್.ಟಿ., ಮಹಾ ನಗರ ಪಾಲಿಕೆ ಆಯುಕ್ತರಾದ ಶ್ರೀ ವಿಶ್ವನಾಥ್ ಮುದ್ದಜ್ಜಿ, ಡಿಹೆಚ್ ಓ ಶ್ರೀ ನಾಗರಾಜ್ , ಡಿವೈಎಸ್ಪಿ ರವರಾದ ಶ್ರೀ ನರಸಿಂಹ ವಿ.ತಾಮ್ರದ್ವಜ, ಶ್ರೀ ನಾಗೇಶ್ ಐತಾಳ್, ಶ್ರೀ ಬಿ.ಎಸ್.ಬಸವರಾಜ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಧಾರ್ಮಿಕ ಮುಖಂಡರು, ಜಿಲ್ಲೆಯ ನಾಗರಿಕರು ಉಪಸ್ಥಿತರಿದ್ದರು.

ನಮ್ಮ ಮುಖ್ಯ ವರದಿಗಾರರು ಕರ್ನಾಟಕದಿಂದ,
