ಕಲಘಟಗಿ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ದಿನಾಂಕ: 26-05-2022 ರಂದು ರಾತ್ರಿ 10:30 ಗಂಟೆಯ ಸುಮಾರಿಗೆ ಆರೋಪಿತರಾದ 1) ಅಮ್ಜದ್ಖಾನ ಬಾರಿಗಿಡದ, ಸಾ|| ಮುಲ್ಲಾಓಣಿ, 2) ಅಬ್ದುಲ್ @ಅದ್ದು ಮುಲ್ಲಾ, ಸಾ|| ಮುಲ್ಲಾ ಓಣಿ, 3) ಅಫ್ರಿದಿಖಾನ್ ಬಿಜಾಪುರ, ಸಾ|| ಚಿತ್ರಗಾರ ಓಣಿ, 4) ಹುಸೇನ್ ಮುಲ್ಲಾ, ಸಾ|| ಮುಲ್ಲಾ ಓಣಿ, 5) ಯುನುಸ್ ಬೆಂಗೇಋಇ, ಸಾ|| ಕಳ್ಳಿ ಓಣಿ, 6) ಮೊಯಿನ್ಖಾನ್ ಧಾರವಾಡ, ಸಾ|| ಮಿಠಾಯಿಗಾರ ಓಣಿ, 7) ಮಹಮ್ಮದ್ ಸಲೀಂ ವಾಲೀಕಾರ, ಸಾ|| ಸೊಪ್ಪಿಮಠ ಓಣಿ, ಕಲಘಟಗಿ ಪಟ್ಟಣ ಇವರುಗಳು ಸೇರಿಕೊಂಡು ಪಿರ್ಯಾದಿದಾರ ಅರ್ಜನ ಕಾಳೆ ಇತನಿಗೆ ಕೈಗಡ ಹಣದ ವಿಷಯವಾಗಿ ಸಾಯಿಸುವ ಉದ್ದೇಶದಿಂದ ರಾಡು, ಚಾಕು ಹಾಗೂ ಬಡಗಿ ಹಾಗೂ ತಮ್ಮ ಕೈಕಾಲುಗಳಿಂದ ಹಲ್ಲೆ ಮಾಡಿ ಭಾರೀ ಪ್ರಮಾಣದ ಗಾಯಪಡಿಸಿ ಪಿರ್ಯಾದಿದಾರರಿಗೆ ಸಾಯಿಸಲು ಪ್ರಯತ್ನಿಸಿದ್ದು, ಈ ಕುರಿತು ಕಲಘಟಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ.ಪಿ.ಕೃಷ್ಣಕಾಂತ್ ಐಪಿಎಸ್ ರವರು ತನಿಖಾಧಿಕಾರಿಯವರಿಗೆ ಸೂಕ್ತ ಮಾರ್ಗದರ್ಶನ್ ನೀಡಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಸದರಿ ಆರೋಪಿತರಿಗೆ ನ್ಯಾಯಾಲಯ ಬಂಧನಕ್ಕೆ ಒಳಪಡಿಸಿರುತ್ತಾರೆ. ಹಾಗೂ ಗಾಯಾಳುವಿನ ಚಿಕಿತ್ಸೆ/ಯೋಗಕ್ಷೆಮ ಕುರಿತು ಆಸ್ಪತ್ರೇಗೆ ಭೇಟಿ ನೀಡಿ ವಿಚಾರಿಸಿರುತ್ತಾರೆ.