ದಿನಾಂಕ: 14-08-2023 ರಂದು ಸಾಯಂಕಾಲ 04:15 ಗಂಟೆಗೆ ಫಿರ್ಯಾದಿದಾರರಾದ ಶ್ರೀ ದಯಾನಂದ ತಂದೆ ರಾಣಪ್ಪ ಮದನಕರ ವಯ: 53 ವರ್ಷ, ಉ: ಭಾರತ ಗ್ಯಾಸ ಕಂಪನಿಯ ಗೋಡಾನ ಇಂಚಾರ್ದ, ಸಾ|| ವಿ.ಕೆ ಸಲಗರ, ತಾ|| ಕಮಲಾಪೂರ, ಜಿ|| ಕಲಬುರಗಿ ರವರು ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ: 14-08-2023 ರಂದು ಮದ್ಯಾಹ್ನ 2:20 ಗಂಟೆ ಸುಮಾರಿಗೆ ಶಾರದಾ ವಿವೇಕ ಮಹಿಳಾ ಕಾಲೇಜ ಸಾರ್ವಜನಿಕ ರಸ್ತೆ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ 12 ಜನರು ದ್ವಿ-ಚಕ್ರ ವಾಹನದ ಮೇಲೆ ಬಂದು ಮೋಟಾರ ಸೈಕಲ್ ಹಾಯಿಸಿದಂತೆ ಮಾಡಿ ಫಿರ್ಯಾದಿದಾರ ಕೈಯಲ್ಲಿದ್ದ 04 ಲಕ್ಷ ರೂ. ಹಣದ ಬ್ಯಾಗನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಚೌಕ ಪೊಲೀಸ್ ಠಾಣೆ ಗುನ್ನೆ ನಂ. 151/2023 ಕಲಂ 392 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಸದರಿ ಪ್ರಕರಣದ ಆರೋಪಿತರ ಪತ್ತೆಗಾಗಿ ಮಾನ್ಯ ಶ್ರೀ ಅಡೂರು ಶ್ರೀನಿವಾಸುಲು ಐ.ಪಿ.ಎಸ್ (ಕಾ&ಸೂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ, ಮತ್ತು ಶ್ರೀ ಐ.ಎ.ಚಂದ್ರಪ್ಪ ಕೆ.ಎಸ್.ಪಿ.ಎಸ್ (ಅ&ಸಂ) ಉಪ-ಪೊಲೀಸ ಆಯುಕ್ತರು ಕಲಬುರಗಿ ನಗರ ಹಾಗೂ ಶ್ರೀ ದೀಪನ್ ಎಂ.ಎನ್ ಸಹಾಯಕ ಪೊಲೀಸ ಆಯುಕ್ತರು ಉತ್ತರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಚೌಕ ಪೊಲೀಸ ಠಾಣೆಯ ಪೊಲೀಸ ಇನ್ಸ್ ಪೆಕ್ಟರರವರಾದ ಶ್ರೀ ರಾಘವೇಂದ್ರ ಭಜಂತ್ರಿ ರವರ ನೇತೃತ್ವದಲ್ಲಿ ಶ್ರೀಮತಿ ಶಶಿಕಲಾ ಎಸ್. ನಿರ್ಮಲಕರ್\’ ಪಿ.ಎಸ್.ಐ(ಅ) ಹಾಗೂ ಸಿಬ್ಬಂದಿಯವರಾದ ಸಂಜೀವಕುಮಾರ ಸಿ.ಹೆಚ್.ಸಿ-169, ಶಂಕರಲಿಂಗ ಸಿ.ಹೆಚ್.ಸಿ-4, ಶಿವಾನಂದ ಸಿ.ಹೆಚ್.ಸಿ-229, ನಾಗೇಂದ್ರ ಸಿ.ಪಿ.ಸಿ-79, ಸುರೇಶ ಸಿ.ಪಿ.ಸಿ-130, ಮಹ್ಮದ ತೌಸೀಫ್ ಹುಸೇನ ಸಿ.ಪಿ.ಸಿ-189, ಮೋಸಿನ್ ಸಿ.ಪಿ.ಸಿ-285, ರವರುಗಳನ್ನೊಳಗೊಂಡ ತಂಡವು ದಿನಾಂಕ: 19-08-2023 ರಂದು ಬೆಳಿಗ್ಗೆ 10:00 ಗಂಟೆಗೆ ಪ್ರಕರಣದ ಆರೋಪಿತರನ್ನು ದಸ್ತಗಿರಿ ಮಾಡಿ ಕೂಲಂಕೂಪವಾಗಿ ವಿಚಾರಿಸಿದಾಗ ಆರೋಪಿಗಳು ತಮ್ಮ ಮೋಜಿನ ಜೀವನಕ್ಕಾಗಿ ಸುಲಿಗೆ ಮಾಡಿರುವ ಬಗ್ಗೆ ತನ್ನೊಪ್ಪಿಕೊಂಡಿದ್ದು, ಸದರಿ ಆರೋಪಿತರಿಂದ ಸುಮಾರು 2,02,300/- ರೂ ನಗದು ಹಣ, ಇದೇ ಹಣದಲ್ಲಿ ಖರೀದಿಸಿರುವ 1 ಪ್ಲಸ್ ಮೊಬೈಲ್ ಅಂ.ಕಿ, 18,000/-ರೂ ಹೀಗೆ ಖರೀದಿಸಿರುವ ವಿವಿಧ ವಸ್ತುಗಳು ಒಟ್ಟು ಅಂ.ಕಿ. 2,20,300/-ರೂ ನೇದ್ದವುಗಳನ್ನು ಹಾಗೂ ಆರೋಪಿತರು ಕೃತ್ಯಕ್ಕೆ ಉಪಯೋಗಿಸಿದ ಒಂದು ಸಿಲ್ವರ್ ಬಣ್ಣದ ಹಿರೋ ಸ್ಟೈಂಡರ್ ದ್ವಿ-ಚಕ್ರ ವಾಹನ ಮತ್ತು 01 ಮೊಬೈಲನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.
ಸದರಿ ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಚೇತನ್.ಆರ್., ಐ.ಪಿ.ಎಸ್ ಕಲಬುರಗಿ ನಗರ ರವರು ಶ್ಲಾಘಿಸಿರುತ್ತಾರೆ.