ದಿನಾಂಕ: 02.05.2024 ರಂದು ಪುಲಕೇಶಿನಗರ ಪೊಲೀಸ್ ಠಾಣೆ ಸರಹದ್ದಿನ ಸ್ಟೀಫನ್ ರಸ್ತೆಯಲ್ಲಿ ಫಿರಾದುದಾರರೊಬ್ಬರು ಮನೆಯ ಮುಂದೆ ನಿಲ್ಲಿಸಿದ್ದ ದ್ವಿ-ಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರನ್ನು ನೀಡಿರುತ್ತಾರೆ. ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಭಾತ್ಮೀದಾರರಿಂದ ಖಚಿತವಾದ ಮಾಹಿತಿಯನ್ನು ಪಡೆದು, ದಿನಾಂಕ:09.06.2024 ರಂದು ಓರ್ವ ವ್ಯಕ್ತಿಯನ್ನು ಲಿಂಗರಾಜಪುರ ಬ್ರಿಡ್ಜ್ ಬಳಿ ಬೈಕ್ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ನಂತರ ಈಸ್ಟ್ ರೈಲ್ವೇ ಸ್ಟೇಷನ್ ಬಳಿ ನಿಲ್ಲಿಸಿದ್ದ 3 ದ್ವಿ-ಚಕ್ರ ವಾಹನಗಳು ಸೇರಿದಂತೆ ಒಟ್ಟು 4 ದ್ವಿ-ಚಕ್ರ ವಾಹನಗಳನ್ನು ಸಹ ವಶಕ್ಕೆ ಪಡೆದುಕೊಳ್ಳಲಾಯಿತು. ಅವುಗಳ ಒಟ್ಟು ಮೌಲ್ಯ 2,95,000/- (ಎರಡು ಲಕ್ಷದ ತೊಂಬತ್ತೈದು ಸಾವಿರ
ರೂಪಾಯಿ).
ನಂತರ ಆತನನ್ನು ದಿನಾಂಕ:10/06/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರಡಿಸಲಾಗಿ, ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.
ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀ ಕುಲದೀಪ ಕುಮಾರ್ ಆರ್ ಜೈನ್ ಮತ್ತು ಪುಲಕೇಶಿನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ.ಸಿ.ಆರ್.ಗೀತಾ ರವರ ಮಾರ್ಗದರ್ಶನದಲ್ಲಿ ಪುಲಕೇಶಿನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ.ಗೋವಿಂದರಾಜು ಬಿ ಹಾಗೂ ಅಧಿಕಾರಿ/ಸಿಬ್ಬಂದಿಯವರ ತಂಡ ಪ್ರಕರಣವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.