ದಿನಾಂಕ:-25-09-2021 ರಂದು ರಾತ್ರಿ 10.45 ಗಂಟೆಯಲ್ಲಿ ಸಮಯದಲ್ಲಿ ಶ್ರೀ.ರಘು ರವರು ತಮ್ಮ ಕೆಎ-41-ಇಕ್ಯೂ -9675, ಬಜಾಜ್ ಪಲ್ಸರ್ ದ್ವಿಚಕ್ರ ವಾಹನವನ್ನು ಮಾಗಡಿ ಮುಖ್ಯರಸ್ತೆಯ ಸುಂಕದಕಟ್ಟೆ ಬಸ್ ನಿಲ್ದಾಣದ ಹತ್ತಿರ ನಿಲ್ಲಿಸಿ ಮರು ದಿನ ಬೆಳಗ್ಗೆ ನೋಡಲಾಗಿ ಸದರಿ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.
ದಿನಾಂಕ: 15-06. 2023ರಂದು ಆರೋಪಿಯಾದ ಪ್ರಕಾಶ ಮೋತಿಲಾಲ್ ರಾಥೋಡ್,21 ವರ್ಷ ಆರ್.ಟಿ ನಗರ ವಾಸಿ ಎಂಬುವವನ್ನು ದಸ್ತಗಿರಿ ಮಾಡಿ ಈತನ ವಶದಿಂದ ಮತ್ತು ಆತನು ನೀಡಿದ ಮಾಹಿತಿಯ ಮೇರೆಗೆ ಒಟ್ಟು 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಾಹನಗಳ ಪೈಕಿ ರಾಜಾಜಿನಗರ, ವಿಜಯನಗರ, ಹೆಬ್ಬಾಳ ಪೊಲೀಸ್ ಠಾಣೆಗಳ ಪ್ರಕರಣಕ್ಕೆ ಸಂಬಂಧಪಟ್ಟಿರುತ್ತದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರದ ಡಿ.ಸಿ.ಪಿ(ಪಶ್ಚಿಮ) ಶ್ರೀ ಲಕ್ಷ್ಮಣ್ ಬನಿಂಬರಗಿ, ವಿಜಯನಗರ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ರವಿ ರವರುಗಳ ಮಾರ್ಗದರ್ಶನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ಬಿ.ಎನ್.ಲೋಹಿತ್ ರವರ ನೇತೃತ್ವದಲ್ಲಿ ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ಯಶ್ವಸಿಯಾಗಿ ಭೇದಿಸಿರುತ್ತಾರೆ.