ಒಂದು ಬಜಾಜ್ ಪಲ್ಸರ್ 200 ಸಿ.ಸಿ ಮೋಟಾರ್ ಸೈಕಲ್, ಒಂದು ಟಿ.ವಿ.ಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ ಹಾಗೂ ಒಂದು ಹೊಂಡಾ ಡಿಯೋ ವಾಹನಗಳ ವಶ. ಮೌಲ್ಯ ರೂ. 2,00,000/
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ತನಿಖೆಯನ್ನು ಮುಂದುವರೆಸಿದ ತನಿಖಾಧಿಕಾರಿಯು ದಿನಾಂಕ:08-07-2023 ರಂದು ಒಬ್ಬ ಆಸಾಮಿಯನ್ನು ದಸ್ತಗಿರಿ ಮಾಡಿದ್ದು, ಆತನನ್ನು ವಿಚಾರಣೆ ಮಾಡಲಾಗಿ, ಆರೋಪಿಯು ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ಸರಹದ್ದಿನಲ್ಲಿ 2 ದ್ವಿ ಚಕ್ರ ವಾಹನಗಳಲ್ಲಿ ಭಾಗಿಯಾಗಿದ್ದು ಹಾಗೂ ಒಂದು ಪ್ರಕರಣ ಕಾಡುಗೋಡಿ ಪೊಲೀಸ್ ಠಾಣಾ ಪ್ರಕರಣವಾಗಿರುತ್ತದೆ. ಆತನಿಂದ ಒಟ್ಟು 3 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಚರಣೆಯನ್ನು ಬೆಂಗಳೂರು ನಗರದ ಮಾನ್ಯ ಡಿ.ಸಿ.ಪಿ ಪಶ್ಚಿಮ ರವರಾದ ಶ್ರೀ ಲಕ್ಷ್ಮಣ್.ಬ.ನಿಂಬರಗಿ, ಕೆಂಗೇರಿಗೇಟ್, ಉಪ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಭರತ್.ಎಸ್.ರೆಡ್ಡಿ ರವರುಗಳ ಮಾರ್ಗದರ್ಶನದಲ್ಲಿ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಎಂ. ಶಿವಣ್ಣ ರವರ ನೆತೃತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿರವರುಗಳ ತಂಡ ಕಾರ್ಯಚಾರಣೆ ಮಾಡಿ ಆರೋಪಿಯನ್ನು ಪತ್ತೆ ಮಾಡಿರುತ್ತಾರೆ.